Thursday, February 29, 2024

ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸ ಆರಂಭ: ರಾಮಮಂದಿರದಲ್ಲಿ ಮೋದಿ ಭಾಷಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿರುವ ರಾಮಲಲಾ ಪ್ರಾಣ ಪ್ರತಿಷ್ಠಾ ಮಂದಿರದಲ್ಲಿ ನಡೆದ ಕಾರ್ಯಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇವತ್ತು ನಮ್ಮ ರಾಮ ಬಂದ. ಹಲವು ವರ್ಷಗಳ ಹೋರಾಟದ ನಂತರ ರಾಮ ಬಂದ. ಈ ಮಹತ್ವದ ಶುಭ ಘಳಿಗೆಯಲ್ಲಿ ಎಲ್ಲರಿಗೂ ಶುಭಾಶಯ ಎಂದಿದ್ದಾರೆ.

ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ ಮಾತುಗಳು ಹೊರಳದೇ ಗಂಟಲು ಕಟ್ಟುತ್ತಿದೆ. ನಮ್ಮ ರಾಮಲಲಾ ಇನ್ಮುಂದೆ ಟೆಂಟ್​​ನಲ್ಲಿ ಇರಲ್ಲ . ನಮ್ಮ ರಾಮಲಲಾ ದಿವ್ಯ ಮಂದಿರದಲ್ಲಿ ಇರುತ್ತಾನೆ. ಈ ಕ್ಷಣವು ಅತ್ಯಂತ ಪವಿತ್ರವಾಗಿದೆ. ಜನವರಿ 22, 2024 ಕೇವಲ ದಿನಾಂಕವಲ್ಲ, ಆದರೆ ಹೊಸ ಯುಗದ ಆರಂಭ. ನಮ್ಮ ದೇಶವು ಗುಲಾಮ ಮನಸ್ಥಿತಿಯ ವಿರುದ್ಧ ಎದ್ದು ನಿಲ್ಲುವ ಕ್ಷಣ ಇದಾಗಿದೆ ಎಂದು ಮೋದಿ ಹೇಳಿದರು.

ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸ ಆರಂಭವಾಗಲಿದೆ. ಇಂದು ದೇಶದಲ್ಲಿ ವಿಶ್ವಾಸ ಮೂಡುತ್ತಿದೆ. ಈ ಕ್ಷಣದಲ್ಲಿ ನನಗೆ ದೈವಿಕ ಅನುಭವವಾಗಿದೆ. ನಾನು ಭಗವಾನ್ ಶ್ರೀರಾಮನಲ್ಲಿ ಕ್ಷಮೆ ಕೇಳುತ್ತೇನೆ. ಇಷ್ಟು ವರ್ಷ ತೆಗೆದುಕೊಂಡಿದ್ದಕ್ಕೆ ಕ್ಷಮೆಯಾಚಿಸುತ್ತೇವೆ. ಶ್ರೀರಾಮನ ಆಗಮನದಿಂದ ಇಡೀ ದೇಶವೇ ಸಂಭ್ರಮಿಸುತ್ತಿದೆ ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!