ಮಹಿಳಾ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ ಸ್ಟೇಬಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪೊಲೀಸ್​ ಕಾನ್ಸ್​ಟೇಬಲ್​ರೊಬ್ಬರು ಮಹಿಳಾ ಕಾನ್ಸ್​ಟೇಬಲ್​ಗೆ ಗುಂಡಿಕ್ಕಿ ಹತ್ಯೆಗೈದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್​ನ ಫಿರೋಜ್​ಪುರ ಜಿಲ್ಲೆಯಲ್ಲಿ ನಡೆದಿದೆ.  ಕೊಲೆಯಾದ ಮಹಿಳಾ ಕಾನ್ಸ್​ಟೇಬಲ್​ ಅವರನ್ನು ಅಮನ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ.

ಶನಿವಾರ ತಡರಾತ್ರಿ ತನ್ನ ಎಕೆ -47 ಅಸಾಲ್ಟ್ ರೈಫಲ್ನಿಂದ ತನ್ನ ಮಹಿಳಾ ಸಹೋದ್ಯೋಗಿಯ ಎದೆಗೆ ನಾಲ್ಕು ಸುತ್ತು ಗುಂಡು ಹಾರಿಸುವ ಮೂಲಕ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ನಂತರ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ದಾಗ್ರು ಗ್ರಾಮದ ಬಳಿ ಅದೇ ರೈಫಲ್ ಬಳಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗ್ ನೌರಂಗ್ ಕೆ ಸಿಯಾಲ್ ಗ್ರಾಮದವರಾಗಿದ್ದರೆ, ಮಹಿಳಾ ಕಾನ್ ಸ್ಟೇಬಲ್ 26 ವರ್ಷದ ಅಮನ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ.

ಪೊಲೀಸ್​ ಕಾನ್ಸ್​ಟೇಬಲ್ ಗುರುಸೇವಕ್ ಸಿಂಗ್​​, ತಮ್ಮ ಸಹೋದ್ಯೋಗಿಯಾದ ಅಮನ್‌ದೀಪ್ ಕೌರ್ ಅವರನ್ನು ಕೊಲೆ ಮಾಡಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಗುರುಸೇವಕ್ ಸಿಂಗ್​ 2011ರಲ್ಲಿ ಪಂಜಾಬ್ ಪೊಲೀಸ್​ ಇಲಾಖೆಗೆ ಸೇರಿದ್ದರು. ಅಲ್ಲದೇ, ಈಗಾಗಲೇ ಮದುವೆಯಾಗಿದ್ದ ಗುರುಸೇವಕ್ ಸಿಂಗ್​ಗೆ ಒಂದು ಮಗು ಕೂಡ ಇದೆ. ಅಮನ್​ದೀಪ್ ಕೌರ್ ಮತ್ತು ಗುರುಸೇವಕ್ ಸಿಂಗ್ ನಡುವೆ ಏನು ಸಂಬಂಧ ಹಾಗೂ ಈ ಘಟನೆ ಕಾರಣವೇನು ಎಂಬುದು ನಿಗೂಢವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ನವೀನ್​ ಕುಮಾರ್, ಮಹಿಳಾ ಕಾನ್ಸ್​ಟೇಬಲ್ ಅಮನ್‌ದೀಪ್ ಕೌರ್ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಗುರುಸೇವಕ್ ಸಿಂಗ್ ಹತ್ಯೆ ಮಾಡಿದ್ದಾರೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಘಟನೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಇಬ್ಬರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!