ಕಸದಲ್ಲಿ ಬಿದ್ದಿದ್ದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ನೀಡಿ ಹೆಕ್ಕಿ ಜೋಪಾನ ಮಾಡಿದ ಪೊಲೀಸ್ ಅಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕಸದ ರಾಶಿಯಲ್ಲಿದ್ದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ನೀಡುತ್ತಿರುವ ಪೊಲೀಸ್ ಅಧಿಕಾರಿಯ ಫೋಟೋಗೆ ಮೆಚ್ಚುಗೆಯ ಮಹಾಪೂರಗಳೇ ಹರಿದುಬರುತ್ತಿವೆ.
ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿತ್ತು. ಹಿಲ್ಪಾಳ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಸ್ಮಶಾನದ ಬಳಿ ಟಿಪ್ಪರ್‌ನಲ್ಲಿ ತಂದೆಸೆದ ಕಸದಲ್ಲಿ ರಾಷ್ಟ್ರ ಧ್ವಜ, ಕೋಸ್ಟ್ ಗಾರ್ಡ್ ಧ್ವಜವೂ ಇದ್ದುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರ ಗಮನಕ್ಕೆ ತಂದಿದ್ದರು.  ಅಧಿಕಾರಿಗಳು  ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಜೀಪಿನಿಂದ ಕೆಳಗಿಳಿಯುತ್ತಿದ್ದಂತೆಯೇ ಟಿ.ಕೆ.ಅಮಲ್ ಎಂಬ ಸಿವಿಲ್ ಪೋಲೀಸ್ ಅಧಿಕಾರಿ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ನೀಡಿದ್ದರು. ಅಷ್ಟೇ ಅಲ್ಲ, ಕಸದ ರಾಶಿಯಿಂದ ಧ್ವಜಗಳನ್ನು ಜೋಪಾನವಾಗಿ ತೆಗೆದು ಒಂದೊಂದಾಗಿ ಮಡಚಿ, ತಮ್ಮ ವಶದಲ್ಲಿರಿಸಿಕೊಂಡರು. ನಾವೇ ವಿಲೇ ಮಾಡುತ್ತೇವೆ ಎಂದು ಸ್ಥಳೀಯರು ಹೇಳಿದರೂ ಪೊಲೀಸರು ಅದಕ್ಕೊಪ್ಪದೆ ಧ್ವಜಗಳನ್ನು ಕಸದಲ್ಲಿ ಎಸೆದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿ ಅಮುಲ್‌ರನ್ನು ಈ ಬಗ್ಗೆ ಡಿಸಿಪಿ ವಿಶೇಷವಾಗಿ ಸನ್ಮಾನಿಸಿದ್ದಾರೆ. ಜೊತೆಗೆ ಮೇಜರ್ ರವಿ ಸೇರಿದಂತೆ ಹಲವರು ಗಣ್ಯರುಗಳು ಅವರನ್ನು ಖುದ್ದಾಗಿ ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!