Monday, August 8, 2022

Latest Posts

ಶ್ರೀಲಂಕಾಕ್ಕೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳು ಕೇರಳದಲ್ಲಿ ಲ್ಯಾಂಡಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು,ಈಗಾಗಲೇ ಭಾರತ ಅನೇಕ ರೀತಿಯಲ್ಲಿ ಸಹಾಯಕ್ಕೆನಿಂತಿದೆ.
ಇದೀಗ ಕೇರಳದ ತ್ರಿವೇಂಡ್ರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳು ಶ್ರೀಲಂಕಾಕ್ಕೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸಿವೆ.
ಅದಿಕಾರಿಗಳ ಈ ನಿರ್ಧಾರಕ್ಕೆ ಕೇಂದ್ರ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶ್ಲಾಘಿಸಿದ್ದಾರೆ. ಈ ಸಹಾಯವು ನೆರೆರಾಷ್ಟ್ರದೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತದೆ ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss