Tuesday, December 6, 2022

Latest Posts

ಟರ್ಕಿಯ ಇಸ್ತಾಂಬುಲ್ ನ ಜನನಿಬಿಡ ಪ್ರದೇಶದಲ್ಲಿ ಪ್ರಬಲ ಸ್ಫೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟರ್ಕಿಯ ಇಸ್ತಾಂಬುಲ್​ನ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಪ್ರಬಲ ಸ್ಫೋಟ ಸಂಭವಿಸಿದೆ. ಹಲವರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ.

 

ಘಟನೆಯಲ್ಲಿ ಕನಿಷ್ಠ ಒಂದು ಸಾವಾಗಿದ್ದು, ಸ್ಥಳಕ್ಕೆ ಅಂಬ್ಯುಲೆನ್ಸ್, ಅಗ್ನಿಶಾಮಕದಳ ಹಾಗೂ ಪೊಲೀಸರು ಧಾವಿಸಿದ್ದಾರೆ.

ಇಸ್ತಾಂಬುಲ್​ನ ಹೃದಯ ಭಾಗವಾಗಿರುವ ಇಸ್ತಿಕ್ಲಾಲ್ ಅವೆನ್ಯೂದಲ್ಲಿ ಸ್ಫೋಟ ಸಂಭವಿಸಿದ್ದು,ಆದ್ರೆ, ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ.
ಸ್ಫೋಟದ ಭಯಾನಕ ಶಬ್ಧ ಕೇಳಿ ಜನರು ಭಯಭೀತರಾಗಿ ಹಿಂದಕ್ಕೆ ಓಡಿ ಹೋಗಿದ್ದಾರೆ.
ಸ್ಫೋಟದ ಭೀಕರತೆಯ ಹಲವು ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!