Friday, December 9, 2022

Latest Posts

ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಮಗ ಪ್ರಿಯಾಂಕ್ ಖರ್ಗೆ ಕಾರಣ: ರವಿಕುಮಾರ್

ಹೊಸದಿಗಂತ ವರದಿ,ಕಲಬುರಗಿ:

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹಿನಾಯ ಸೋಲಿಗೆ ಅವರ ಪುತ್ರ ಪ್ರಿಯಾಂಕ್ ಖಗೆ೯ನೆ ನೇರ ಕಾರಣವೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ಅವರು ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪ್ರಿಯಾಂಕ್ ಖಗೆ೯ ಅವರ ಮಾತನಾಡುವ ಶೈಲಿಯೇ ಅವರಿಗೆ ಮುಂಬರುವ ಚುನಾವಣೆಯಲ್ಲಿ ಮುಳುವಾಗಲಿದೆ. ಸಕಾ೯ರಿ ಕಾಯ೯ಕ್ರಮದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಜಿಲ್ಲೆಯಲ್ಲಿ ಓಡಾಡದ ಹಾಗೇ ಮಾಡುತ್ತೇವೆ ಎಂಬ ಖಗೆ೯ ಅವರ ಹೇಳಿಕೆಯೇ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದರು.

ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ನಿಮಿತ್ತ ರಾಜ್ಯದಲ್ಲಿ 20 ದಿನ ತಂಗಿದ್ದರು.ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಆದರೆ ಬಿಜೆಪಿಯ ಜನಸಂಕಲ್ಪ ಯಾತ್ರೆ ಗೆ ಅಭೂತಪೂರ್ವ ಬೆಂಬಲ ಜನರಿಂದ ಸಿಗುತ್ತಿದ್ದು,ಜೋಡೋ ಯಾತ್ರೆಯಿಂದ ಕಾಂಗ್ರೆಸ್, ಗೆ ಎನು ಲಾಭವಾಗಿದೆ ಎಂಬುದನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಉತ್ತರಿಸಲಿ ಎಂದರು.

ಕೆಂಪೇಗೌಡ ಅವರ ಪ್ರತಿಮೆ ಉದ್ಗಾಟನೆ ಕಾಯ೯ಕ್ರಮದಲ್ಲಿ ಮುಖ್ಯಮಂತ್ರಿ ಅವರೇ ಖುದ್ದಾಗಿ ಎಲ್ಲರಿಗೂ ಶಿಷ್ವಾಚಾರದ ಪ್ರಕಾರವೇ ಭಾಗವಹಿಸಲು ಹೇಳಿದ್ದಾರೆ.ಆದರೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಟ್ಟು, ಒಳ್ಳೆಯ ಕಾಯ೯ಕ್ರವಾಗಿದೆ ಎಂದು ಪ್ರಬುದ್ಧತೆ ಮೆರೆಯಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಒಡೆದು ಆಳುವ ನೀತಿಗೆ ಬಂದು ನಿಂತಿದೆ.ಜೋಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಶಾಸಕ ಪ್ರಿಯಾಂಕ್ ಖಗೆ೯ ಅವರಿಗೆ ಸೋಲಿನ ಭೀತಿ ಕಾಡುತ್ತಿದ್ದು.ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಹಿಂದೆ ಇರುವ ದಲಿತ, ಅಲ್ಪಸಂಖ್ಯಾತ ಮತಗಳು ಜಾರಿಕೊಂಡು ಹೋಗಿದ್ದು, ದೊಡ್ಡ ಖಗೆ೯ ತರಹವೇ ಸಣ್ಣ ಖಗೆ೯ ಅವರು ಕೂಡ ಭಯಾನಕ, ದಯನೀಯ ಸೋಲನ್ನು ಮುಂಬರುವ ಚುನಾವಣೆಯಲ್ಲಿ ಅನುಭವಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಬಿ‌.ಜಿ.ಪಾಟೀಲ್, ಶಶೀಲ ನಮೋಶಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಅಮರನಾಥ ಪಾಟೀಲ್, ಬಾಬುರಾವ್ ಹಾಗರಗುಂಡಗಿ, ಅರವಿಂದ್ ಚವ್ವಾಣ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!