July 23, 2026
Thursday, July 23, 2026
spot_img

ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಲೋಕಾ ಶಾಕ್, ಕುಂಬಳಗೋಡು ಪಿಡಿಒ ಸೇರಿ ಹಲವು ಕಡೆ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂ ಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಶಾಕ್ ಕೊಟ್ಟಿದೆ.​​ ಬೆಂಗಳೂರು ದಕ್ಷಿಣ ಜಿಲ್ಲೆ, ಧಾರವಾಡ ಹಾಗೂ ರಾಯಚೂರಿನಲ್ಲಿ ಅಧಿಕಾರಿಗಳಿಂದ ದಾಳಿ, ಪರಿಶೀಲನೆ. ಅಕ್ರಮ ಹಣ ಗಳಿಕೆ ಆರೋಪದ ಮೇಲೆ ಬೆಳ್ಳಂ ಬೆಳಗ್ಗೆ. ಕುಂಬಳಗೋಡು ಪಿಡಿಒಗೆ ಲೋಕಾಯುಕ್ತ ಅಧಿಕಾರಿಗಳು ಬೆವರಿಳಿಸಿದ್ದಾರೆ. ಪಿಡಿಒ ಬಿಕೆ ತಿಮ್ಮಯ್ಯ ಮನೆ ಹಾಗೂ ಸಂಬಂಧಿಕರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲಾ ಲೋಕಾಯುಕ್ತ ಎಸ್ ಪಿ ಸ್ನೇಹ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿ ಮೂರು ಕಡೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗ್ತಿದೆ. ಕುಂಬಳಗೋಡು ಪಿಡಿಒ ಬಿಕೆ ತಿಮ್ಮಯ್ಯ ಅವರ ತೋಟದ ಮನೆ, ಅಣ್ಣ ಹಾಗೂ ಅಕ್ಕನ ಮಗನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗ್ತಿದೆ. ಜೊತೆಗೆ ಬೆಂಗಳೂರಿನ ನಾಲ್ಕು ಕಡೆ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.

ಶಿವಮೊಗ್ಗ ಎಸಿಎಫ್ ಮನೆ ಮೇಲೆ ಲೋಕಾ ದಾಳಿ ನಡೆದಿದ್ದು, ಶಿವಮೊಗ್ಗದ ಕಚೇರಿ ಹಾಗೂ ಧಾರವಾಡದ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆ. ಏಕಕಾಲಕ್ಕೆ ದಾಳಿ ಮಾಡಿದ ಅಧಿಕಾರಿಗಳು ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರೋ ಐಷಾರಾಮಿ‌ ಮನೆಯಲ್ಲಿ ಶೋಧ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕಾರ್ಯನಿರ್ವಾಹಕ ಎಂಜಿನಿಯರ್ ಬಸನಗೌಡ ಅವರಿಗೆ ಸೇರಿದ ವಿವಿಧ ಆಸ್ತಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ಇಂದು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದೆ.

ಲೋಕಾಯುಕ್ತ ಅಧಿಕಾರಿಗಳು ಚಿಕ್ಕಹೊನ್ನಕುಣಿ ಪ್ರದೇಶದಲ್ಲಿರುವ ಅವರ ಕಚೇರಿ, ನಿವಾಸ ಹಾಗೂ ಪತ್ನಿ ಮತ್ತು ಸಂಬಂಧಿಕರಿಗೆ ಸೇರಿದ ಆಸ್ತಿಗಳಲ್ಲಿ ಶೋಧ ಕಾರ್ಯ ನಡೆಸಿ, ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !