September 2, 2026
Wednesday, September 2, 2026
spot_img

ಇಷ್ಟೆಲ್ಲಾ ಫೇಮ್‌ ಇದ್ದರೂ ಭಾರತ ಬಿಟ್ಟು ಹೋಗಿದ್ಯಾಕೆ ವಿರಾಟ್‌- ಅನುಷ್ಕಾ? ಅಂತೂ ಕಾರಣ ರಿವೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪವರ್‌ ಕಪಲ್‌ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಭಾರತ ಬಿಟ್ಟು ಪರ್ಮೆಂಟ್‌ ಆಗಿ ಲಂಡನ್‌ನಲ್ಲಿ ವಾಸವಿದ್ದಾರೆ. ಭಾರತದ ಪ್ರತೀ ಮೂಲೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ವಿರಾಟ್‌ ಕೊಹ್ಲಿ ಯಾರು ಎಂದು ತಿಳಿದಿದೆ. ಸಾರ್ವಜನಿಕವಾಗಿ ಓಡಾಡೋಕೆ ಆಗದೇ ಹೈರಾಣಾಗಿದ್ದ ದಂಪತಿ ಲಂಡನ್‌ನಲ್ಲಿ ನೆಮ್ಮದಿಯ ಜೀವನ ಮಾಡ್ತಿದ್ದಾರೆ.

ಭಾರತದಲ್ಲಿಯೇ ನೆಲೆಸಿದ್ದ ವಿರುಷ್ಕಾ ಜೋಡಿ ಇದ್ದಕ್ಕಿದ್ದಂತೆಯೇ ಲಂಡನ್‌ಗೆ ಹೋಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರ ಪತ್ನಿ ಡಾ. ಶ್ರೀರಾಮ ನೇನೇ ವಿರಾಟ್‌ ಹಾಗೂ ಅನುಷ್ಕಾ ಭಾರತ ತೊರೆದಿದ್ದು ಯಾಕೆ ಎಂದು ವಿವರಿಸಿದ್ದಾರೆ.

ಎಷ್ಟೂ ಅಂತ ಸೆಲ್ಫಿ ತಗೋತಾರೆ

ವಿರಾಟ್‌ ಕೊಹ್ಲಿಯನ್ನು ಕಂಡರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಕೊಹ್ಲಿ ಸಾರ್ವಜನಿಕವಾಗಿ ಒಂದು ಹೆಜ್ಜೆ ಮುಂದಕ್ಕೆ ಇಡೋದು ಕೂಡ ಅಸಾಧ್ಯವೇ. ಅಭಿಮಾನಿಗಳು ಎಲ್ಲಿ ಹೋದರೂ ಮುತ್ತಿಗೆ ಹಾಕಿ ಸೆಲ್ಫಿ ಕೇಳುತ್ತಾರೆ. ವಿರಾಟ್‌ ದೇಶ ಬಿಟ್ಟು ಹೋಗಲು ಇದೂ ಒಂದು ಕಾರಣವೇ ಎಂದು ರಣ್‌ವೀರ್‌ ಅಲಹಾಬಾದಿಯಾ ಅವರ ಯುಟ್ಯೂಬ್‌ ಇಂಟರ್‌ವ್ಯೂನಲ್ಲಿ ನೇನೇ ಹೇಳಿದ್ದಾರೆ.

ಮಕ್ಕಳಿಗೆ ನಾರ್ಮಲ್‌ ಬದುಕು ಸಿಗಲಿ

ವಿರಾಟ್‌ ಹಾಗೂ ಅನುಷ್ಕಾ ಯಾವಾಗಲೂ ತಮ್ಮ ಮಕ್ಕಳು ಎಲ್ಲರ ಮಕ್ಕಳಂತೆ ಬೆಳೆಯಬೇಕು ಎಂದು ಆಶಿಸಿದ್ದರು. ತಮ್ಮಿಬ್ಬರ ಸ್ಟಾರ್ಡಮ್‌ನಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಲಿ ಇನ್ಯಾವುದೇ ವಿಷಯಕ್ಕಾಗಲಿ ತೊಂದರೆಯಾಗಬಾರದು ಎಂದು ನಿರ್ಧರಿಸಿದ್ದರು. ಅಮೆರಿಕದಿಂದ ಭಾರತಕ್ಕೆ ಬಂದಾಗ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಂಡೆ. ರೆಸ್ಟೋರೆಂಟ್‌ನಲ್ಲಿ ಕುಳಿತು ಊಟ ಮಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಕೊಹ್ಲಿ ಹೇಳಿಕೊಳ್ಳುತ್ತಿದ್ದರು. ಮಕ್ಕಳಾದ ವಮಿಕಾ ಹಾಗೂ ಅಕಾಯ್‌ ಸಾಮಾನ್ಯರಂತೆ ಎಲ್ಲರ ಜೊತೆ ಬೆರೆತು ಬೆಳೆಯಲಿ ಎಂದು ಲಂಡನ್‌ಗೆ ಶಿಫ್ಟ್‌ ಆಗಿದ್ದಾರೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !