ರಾಮಪುರದಲ್ಲಿ ಕತ್ತೆಗೂ ಒಂದು ರೇಸ್…!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ರಬಕವಿ-ಬನಹಟ್ಟಿ:
ಬೆಂಗಳೂರಿನಲ್ಲಿ ಕುದುರೆ ರೇಸ್ ನಡೆಸುವುದನ್ನು ಕೇಳಿದ್ದೀರಿ. ಅದೇ ರೀತಿ ಶಾಸಕ ಸಿದ್ದು ಸವದಿ ಮತಕ್ಷೇತ್ರದಲ್ಲಿ ಕತ್ತೆಗಳ ರೇಸ್ ಗಮನ ಸೆಳೆದಿದೆ.
ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ ಕಾಟನ್ ಸೀರೆಗಳಿಗೆ ಹೆಸರಾವಾಸಿಯಾಗಿರುವುದರ ಜೊತೆಗೆ ಕತ್ತೆ ರೇಸ್‌ನಿಂದಲೂ ಹೆಸರು ಮಾಡಿದೆ. ಈ ರೇಸ್‌ನಲ್ಲಿ ಭಾಗವಹಿಸುವ ಕತ್ತೆಗಳು ಅಗಸನ ಕತ್ತೆಗಳಲ್ಲ. ಬದಲಾಗಿ ಇಲ್ಲಿ ವಾಸಿಸುವ ಭಜಂತ್ರಿ ಸಮುದಾಯಕ್ಕೆ ಸೇರಿದವು ಎಂಬುದು ಮತ್ತೊಂದು ವಿಶೇಷ.
ಇಲ್ಲಿನ ರಾಮಪೂರದಲ್ಲಿ ಲಕ್ಕವ್ವದೇವಿ ಜಾತ್ರೆ ನಿಮಿತ್ತ ನಡೆದ ಸ್ಪರ್ಧೆಯಲ್ಲಿ 10 ಕ್ಕೂ ಅಕ ಕತ್ತೆಗಳು ಹಾಗೂ ಅದರ ಮಾಲಿಕರು ಭಾಗವಹಿಸಿದ್ದರು. ರಾಮದೇವ ದೇವಸ್ಥಾನದಿಂದ ಆರಂಭವಾದ ರೇಸ್ ನಗರಸಭೆ ಕಚೇರಿಗೆವರೆಗೆ ಸಾಗಿ ನಂತರ ಆರಂಭಿಕ ಸ್ಥಾನಕ್ಕೆ ಬಂದು ನಿಲ್ಲುವುದು ನಿಯಮ.
ರೇಸ್‌ನಲ್ಲಿ ರಬಕವಿ-ಬನಹಟ್ಟಿ, ರಾಮಪೂರ ಹಾಗು ಆಸಂಗಿ ಗ್ರಾಮಗಳಿಂದ ಕತ್ತೆಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನವನ್ನು ರಾಮಪೂರದ ರವಿ ಭಜಂತ್ರಿಯವರ ಕತ್ತೆ, ದ್ವಿತೀಯ ಸ್ಥಾನವನ್ನು ಬನಹಟ್ಟಿಯ ಮಹಾದೇವ ಭಜಂತ್ರಿ ಹಾಗು ತೃತಿಯ ಸ್ಥಾನವನ್ನು ರಾಮಪೂರದ ನಾಗಪ್ಪ ಭಜಂತ್ರಿಯವರ ಕತ್ತೆ ಪಡೆಯುವಲ್ಲಿ ಕಾರಣವಾಯಿತು.
ಈ ರೇಸ್‌ನ ಪೂರ್ವದಲ್ಲಿ ನಾಲ್ಕೈದು ದಿನಗಳ ಕಾಲ ಕತ್ತೆಗಳಿಗೆ ದಿನಂಪ್ರತಿ ತರಬೇತಿ ನೀಡಿ ನಂತರ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!