CINE NEWS | ದಳಪತಿ ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಿಸು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ದಳಪತಿ ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ವಿಜಯ್ ಹಾಗೂ ಪತ್ನಿ ಸಂಗೀತಾ ಸದ್ಯದಲ್ಲೇ ಡಿವೋರ್ಸ್ ಪಡೆಯಲಿದ್ದಾರೆ ಎನ್ನಲಾಗಿದೆ.

ಇದಕ್ಕೆ ನಿದರ್ಶನದಂತೆ ವಾರಿಸು ಸಿನಿಮಾದ ಯಾವುದೇ ಕಾರ್ಯಕ್ರಮಕ್ಕೂ ಸಂಗೀತಾ ಹಾಜರಾಗಿಲ್ಲ ಎನ್ನಲಾಗಿದೆ. ಅಲ್ಲದೆ ವಿಕಿಪೀಡಿಯಾ ಪೇಜ್‌ನಲ್ಲಿಯೂ ಈ ಜೋಡಿ ಈಗಾಗಲೇ ಬೇರೆಯಾಗಿದ್ದಾರೆ ಎಂದು ಹೇಳಲಾಗಿದೆ. ಇದು ನಿಜವಾ? 22 ವರ್ಷದ ದಾಂಪತ್ಯಕ್ಕೆ ಜೋಡಿ ಬ್ರೇಕ್ ಹಾಕಲಿದ್ದಾರಾ? ಅಧಿಕೃತ ಸ್ಪಷ್ಟನೆಗೆ ಕಾಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!