July 4, 2026
Saturday, July 4, 2026
spot_img

ಕೊರಳಲ್ಲಿ ಮಾಂಗಲ್ಯ, ಕೈತುಂಬ ಗಾಜಿನ ಬಳೆ: ರಹಸ್ಯವಾಗಿ ಮದುವೆಯಾದ್ರಾ ಕಂಗನಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್‌ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಹಸಿರು ಬಳೆಗಳು ಮತ್ತು ಮಂಗಳಸೂತ್ರ ಧರಿಸಿದ್ದಾರೆ. ಈ ಬೆನ್ನಲ್ಲೇ ಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಇದೀಗ ಈ ವಿಚಾರವಾಗಿ ಖುದ್ದು ಕಂಗನಾ ಸ್ಪಷ್ಟನೆ ನೀಡಿದ್ದು, ಮದುವೆ ಕುರಿತ ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

ಗಾಸಿಪ್ ಗಳಿಗೆ ಬಿತ್ತು ತೆರೆ

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್‌ನಲ್ಲಿ ಕಂಗನಾ, ಪ್ರತಿದಿನ ನಗರದಲ್ಲಿ ಮತ್ತು ಸುತ್ತಮುತ್ತ ಸಿನಿಮಾ ಚಿತ್ರೀಕರಣ ಮಾಡುತ್ತಿರುತ್ತೇವೆ. ಸಿನಿಮಾದ ಒಂದು ಸನ್ನಿವೇಶಕ್ಕೆ ರೆಡಿಯಾಗಿದ್ದ ವೇಳೆ ಯಾರೋ ಕ್ಲಿಕ್ ಮಾಡಿದ್ದಾರೆ. ಇದರಿಂದಾಗಿ ಈಗ ನನಗೆ ತುಂಬಾ ಫೋನ್ ಕರೆಗಳು ಬರುತ್ತಿವೆ ಎಂದು ಹೇಳಿದರು. ಆದರೆ ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ಹೇಳುವ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಸಿನಿಮಾ ಶೂಟಿಂಗ್ ಸಮಯದ ದೃಶ್ಯ

ವೈರಲ್ ಆಗಿರುವ ಫೋಟೋ ಕಂಗನಾ ಅಭಿನಯದ ‘ಕ್ವೀನ್ 2’ ಸಿನಿಮಾದಾಗಿದ್ದು, ಹೀಗಾಗಿ ಈ ಸಾಂಪ್ರದಾಯಿಕ ದೃಶ್ಯ ನಿಜ ಜೀವನದ್ದಲ್ಲ, ಬದಲಿಗೆ ಮುಂಬರುವ ಸಿನಿಮಾದ ಚಿತ್ರೀಕರಣದ ಸಂದರ್ಭದ್ದಾಗಿದೆ. ಈಗಾಗಲೇ ಮುಂಬೈನಲ್ಲಿ ಇದರ ಶೂಟಿಂಗ್ ಆರಂಭಿಸಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದ ಚರ್ಚೆಗಳಿಗೆ ತೆರೆ ಎಳೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !