ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆ ಭಾರತದ ಜಿಡಿಪಿ 6.3%

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸೆಪ್ಟೆಂಬರ್ 2022 ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 6.3 ರಷ್ಟು ಬೆಳವಣಿಗೆಯಾಗಿದೆ ಎಂದು ಸರ್ಕಾರಿ ಅಂಕಿಅಂಶಗಳು ಬುಧವಾರ ತೋರಿಸಿವೆ. ಈ ಮೂಲಕ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಏರುತ್ತಿರುವ ಹಣದುಬ್ಬರದ ಭಯದ ನಡುವೆ ಭಾರತೀಯ ಆರ್ಥಿಕತೆಯು ತನ್ನ ವೇಗವನ್ನು ಕಾಯ್ದುಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಜೂನ್-2022 ರಲ್ಲಿ, ಜಿಡಿಪಿ ಅಂಕಿ ಅಂಶವು ಶೇ.13.5 ಆಗಿತ್ತು. ಇದೇ ಸಮಯದಲ್ಲಿ ಕಳೆದ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಜಿಡಿಪಿಯ ಬೆಳವಣಿಗೆಯು ಶೇಕಡಾ 8.4 ರಷ್ಟಿತ್ತು.

ಬುಧವಾರ ಬಿಡುಗಡೆಯಾದ ಬೆಳವಣಿಗೆ ದರದ ಅಂಕಿಅಂಶಗಳು ಈ ತಿಂಗಳ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ 6.1% ರಿಂದ 6.3% ರ ಪ್ರಕ್ಷೇಪಗಳಿಗೆ ಅನುಗುಣವಾಗಿವೆ ಎಂದು ಹೇಳಲಾಗಿದೆ.

ಜಗತ್ತಿನ ಅನೇಕ ದೇಶಗಳು ಆರ್ಥಿಕತೆಯ ಕುಸಿತವನ್ನು ಕಾಪಾಡಲು ಹೆಣಗಾಡುತ್ತಿರುವ ವೇಳೆ ಭಾರತದ ಅಂಕಿ-ಅಂಶಗಳು ಉತ್ತಮವಾಗಿ ಪ್ರಕಟವಾಗಿದೆ.

ಬ್ರಿಟನ್‌ ಈಗಾಗಲೇ ಆರ್ಥಿಕ ಹಿಂಜರಿತದ ಸ್ಥಿತಿಗೆ ತಲುಪುವುದಾಗಿ ಘೋಷಣೆ ಮಾಡಿದೆ. ಇನ್ನೊಂದೆಡೆ ಚೀನಾ ಈವರೆಗೂ ತನ್ನ ಜಿಡಿಪಿ ಅಂಕಿ ಅಂಶಗಳನ್ನು ಪ್ರಕಟ ಮಾಡಿಲ್ಲ.ಇನ್ನು ಅಮೆರಿಕದ ಜನ ಕೂಡ ಹಣದುಬ್ಬರದ ಪರಿಣಾಮ ಎದುರಿಸುತ್ತಿದ್ದಾರೆ. ಆದರೆ, ಭಾರತದ ಅಂಕಿ-ಅಂಶಗಳು ಅರ್ಥಿಕತೆ ಸ್ಥಿರವಾಗಿದೆ ಎನ್ನುವ ಲಕ್ಷಣ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!