October 11, 2026
Sunday, October 11, 2026
spot_img

ಅಮ್ಮ ಕುಡಿಯೋದು ಬಿಟ್ಬಿಡಮ್ಮ ಎಂದು ಕಣ್ಣೀರಿಟ್ಟ 11 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮ್ಮ ಕುಡಿಯೋದು ನಿಲ್ಲಿಸಮ್ಮ ಎಂದು ಕಣ್ಣೀರಿಟ್ಟು ಗೋಗರೆದ ಮಗಳನ್ನೇ ತಾಯಿ ಕೊಂದಿದ್ದಾಳೆ.

ಯಾದಗಿರಿಯ ರಾಜೀವ್‌ ನಗರದಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಮಗಳು ಪ್ರತಿಭಾ ತನ್ನ ತಾಯಿಗೆ ಮದ್ಯ ಸೇವನೆ ನಿಲ್ಲಿಸು ಎಂದು ಹೇಳಿದ್ದಾಳೆ. ಇದಕ್ಕೆ ಸಿಟ್ಟಾದ ತಾಯಿ ನಿರ್ಮಲಾ ಮಗಳ ಕತ್ತು ಹಿಸುಕಿ ಕೊಂದಿದ್ದಾಳೆ.

ಮಗಳನ್ನು ಕೊಲೆಗೈದು ಆತ್ಮಹತ್ಯೆಯ ಕತೆ ಕಟ್ಟಿದ್ದಳು. ಜ್ಯೂಸ್ ಕುಡಿಯಲು 15 ರೂ. ಹಣ ಕೇಳಿದ್ದಳು. ಹಣ ಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಳು. ಹತ್ಯೆ ಬಳಿಕ ಕುತ್ತಿಗೆಗೆ ಸೀರೆ ಕಟ್ಟಿದ್ದಳು ಎಂದು ತಿಳಿದು ಬಂದಿದೆ.

ಮದ್ಯ ಸೇವನೆ ಮಾಡಿ ಹಣ ಖರ್ಚು ಮಾಡಿದರೆ ನಮಗೆ ಊಟಕ್ಕೆ ತೊಂದರೆಯಾಗುತ್ತದೆ. ನೀನು ಕುಡಿದು ಸತ್ತರೇ ನಮ್ಮನ್ನು ನೋಡಿಕೊಳ್ಳುವರು ಯಾರು? ಅಮ್ಮ ಕುಡಿಯುವುದನ್ನು ಬಿಡು ಎಂದು ಪ್ರತಿಭಾ ಹೇಳಿದ್ದಳು. ಇದರಿಂದ ನಿರ್ಮಲಾ ಕೋಪಗೊಂಡು ಕೊಲೆ ಮಾಡಿದ್ದಳು.

Must Read