ಶಿವಮೊಗ್ಗ | ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ

ಹೊಸದಿಗಂತ ವರದಿ,ಶಿವಮೊಗ್ಗ:

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ತಾಲೂಕಿನ ಚೋರಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಂದ್ರಶೇಖರ್(ಕೋಟಿ) ಅವರು ತಮ್ಮ ತೋಟದ ಕೊಟ್ಟಿಗೆಯಲ್ಲಿ ಎಂದಿನಂತೆ ಮಂಗಳವಾರ ಸಂಜೆ ಹಸುಗಳನ್ನು ಕಟ್ಟಿ ಹಾಕಿದ್ದರು. ಬುಧವಾರ ಬೆಳಿಗ್ಗೆ ತೋಟಕ್ಕೆ ಹೋದಾಗ ಹಸುವೊಂದು ಮೃತಪಟ್ಟಿರುವುದು ಕಂಡುಬಂದಿದೆ. ಚಿರತೆ ದಾಳಿ ನಡೆಸಿ ಹಸುವನ್ನು ಅರ್ಧ ತಿಂದು ಹಾಕಿತ್ತು. ಗ್ರಾಮದ ಸಮೀಪದಲ್ಲೇ ಚಿರತೆ ಕಾಣಿಸಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕುಂಸಿ ಪಶುವೈದ್ಯಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆನಂದಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇಲಾಖೆ ಗಮನದಲ್ಲಿದೆ. ಅದನ್ನು ಸೆರೆ ಹಿಡಿಯಲು ಬೋನು ಸಹಿತ ಇಡಲಾಗಿದೆ. ಆದರೆ ಈಗ ಚಿರತೆ ಬೇರೆ ಸ್ಥಳದಲ್ಲಿ ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಜಿಂಕೆಯೊಂದನ್ನು ಅದು ಅಟ್ಟಿಸಿಕೊಂಡು ಬಂದಿತ್ತು. ಆದರೆ ಜಿಂಕೆ ತಪ್ಪಿಸಿಕೊಂಡಿತ್ತು. ಚಿರತೆ ಹಿಡಿಯಲು ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!