ಇರಾನಿ ಮಹಿಳೆಯರಿಗೆ ಬೆಂಬಲ ಸೂಚಿಸುತ್ತ ಸಂಸತ್ತಿನಲ್ಲೇ ಕೂದಲು ಕತ್ತರಿಸಿಕೊಂಡ ಸ್ವೀಡನ್ ಸಂಸದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇರಾನ್‌ನಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿರುದ್ಧ ಪ್ರತಿಭಟನೆಗಳಿಗೆ ಸ್ವೀಡನ್‌ ಸಂಸದೆ ಬೆಂಬಲ ಘೋಷಿಸಿದ್ದಾರೆ. ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ತನ್ನ ಕೂದಲನ್ನು ಕತ್ತರಿಸಿಕೊಂಡು ಇರಾನ್‌ನಲ್ಲಿನ ಪ್ರತಿಭಟನಾಕಾರರ ಪರ ನಿಲ್ಲುವುದಾಗಿ ಸಂಸದೆ ಅಬಿರ್ ಅಲ್-ಸಹ್ಲಾನಿ ತಿಳಿಸಿದರು. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಕುರಿತು ಮಾತನಾಡಿದ ಆಕೆ, ಮಹಿಳೆಯರ ವಿರುದ್ಧ ಇರಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಕೂಡಲೇ ನಿಲ್ಲಬೇಕು. ಅದುವರೆಗೂ ಮಹುಳೆಯರ ಪರ ತಾನು ಧ್ವನಿಯಾಗಿ ನಿಲ್ಲುವುದಾಗಿ ಘೋಷಿಸಿದರು. ಇರಾನ್‌ನಲ್ಲಿ ಹಿಜಾಬ್‌ ಧರಿಸಿಲ್ಲವೆಂದು ಯುವತಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಇಡೀ ಇರಾನ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹತ್ತಿಕ್ಕಲು ಅಲ್ಲಿನ ಸರ್ಕಾರ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌, ಫೈರಿಂಗ್‌ ನಡೆಸುತ್ತಿವೆ. ಈ ಹಿಂಸಾಚಾರದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!