ದಿವ್ಯಾ ಉರುಡುಗ, ಅರವಿಂದ್ ಕೆಪಿ ಅರ್ದಂಬರ್ಧ ಪ್ರೇಮಕಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ನೂರಾರು ಪ್ರೇಮಕಥೆಗಳು ಹುಟ್ಟಿದೆ ಆದರೆ ಮುಂದುವರಿದಿದ್ದು ಕೆಲವು ಮಾತ್ರ.
ಇದೀಗ ಬಿಗ್ ಬಾಸ್ ಜೋಡಿ ಹಕ್ಕಿ ದಿವ್ಯಾ ಮತ್ತು ಅರವಿಂದ್ ಅಭಿನಯದ ಅರ್ದಂಬರ್ಧ ಪ್ರೇಮಕತೆ ಸಿನಿಮಾದ ಇಂಟ್ರೊಡಕ್ಷನ್ ಟೀಸರ್ ರಿಲೀಸ್ ಆಗಿದೆ.

ಸಿನಿಮಾ ಚಿತ್ರೀಕರಣ ಮುಗಿದಿದ್ದು, ಅರ್ಜುನ್ ಜನ್ಯ ಸಿನಿಮಾಗೆ ಚಂದದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಸಿನಿಮಾ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಬಿಗ್‌ಬಾಸ್‌ನಲ್ಲಿ ದಿವ್ಯಾ ಅರವಿಂದ್ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದು, ಬೈಕರ್ ಅರವಿಂದ್ ಇದೀಗ ಹೀರೋ ಆಗಿದ್ದಾರೆ.

ಕನಸುಗಳ ಜೊತೆ ಪ್ರೀತಿ ಬೆಳೆಯುತ್ತದೆ, ಆದರೆ ವಾಸ್ತವಾಗಿ ಸಮಾಜದ ಜೊತೆ ಪ್ರೀತಿ ಉಳಿಸಿಕೊಳ್ಳೋದು ಸುಲಭದ ಕೆಲಸ ಅಲ್ಲ ಎನ್ನುವುದನ್ನು ಸಿನಿಮಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!