Photo Gallery| ದುಬೈನಲ್ಲಿರುವ ಹಿಂದೂ ದೇವಾಲಯನ್ನೊಮ್ಮೆ ಸುತ್ತಿ ಬರೋಣ ಬನ್ನಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದುಬೈನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹಿಂದೂ ದೇವಾಲಯವನ್ನು ಬುಧವಾರ ಭಕ್ತರಿಗಾಗಿ ತೆರೆಯಲಾಗಿದೆ. ಈ ದೇವಾಲಯವು ಯುಎಇಯ ಬೆಬೆಲಿ ಅಲಿ ಪ್ರದೇಶದಲ್ಲಿದೆ. ದುಬೈನಲ್ಲಿ ಕೇವಲ ಎರಡು ಹಿಂದೂ ದೇವಾಲಯಗಳಿದ್ದು, ಅವುಗಳಲ್ಲಿ ಮೊದಲನೆಯದನ್ನು 1958 ರಲ್ಲಿ ನಿರ್ಮಿಸಲಾಯಿತು. ಎರಡನೆಯದು ಹೊಸದಾಗಿ ತೆರೆಯಲಾದ ಹಿಂದೂ ದೇವಾಲಯ ಈ ದೇವಾಲಯದಲ್ಲಿ ಹಲವು ವಿಶೇಷತೆಗಳಿವೆ ನೋಡೋಣ ಬನ್ನಿ.

Dubai Hindu temple

Dubai Hindu temple | ദുബൈ സഹിഷ്ണുത മണ്ണിലെ ഏറ്റവും വലിയ ഹിന്ദു ക്ഷേത്രം വിശ്വാസികള്‍ക്ക് സമര്‍പിച്ചു

ದೇವಾಲಯದ ಅಧಿಕಾರಿಗಳ ಪ್ರಕಾರ, ಮಂಗಳವಾರ ದೇವಾಲಯದ ಉದ್ಘಾಟನೆ ನಡೆದಿದೆ. ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಮತ್ತು ಯುಎಇಯ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಗೌರವಾನ್ವಿತ ಅತಿಥಿಯಾಗಿ ಭಾಗಿಯಾಗಿದ್ದರು.

Dubai Hindu Temple: దుబాయ్‌లో హిందూ దేవాలయం.. నేడు భక్తుల సందర్శనార్థం తెరచుకోనున్న ఆలయం.. ఇక్కడ ప్రత్యేకతలు ఏమిటంటే?

ಭದ್ರತಾ ಕಾರಣಗಳಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದಸರಾ ಪ್ರಯುಕ್ತ ಭಕ್ತರಿಗೆ ಭೇಟಿ ನೀಡಲು ದೇವಾಲಯವನ್ನು ಬುಧವಾರ ತೆರೆಯಲಾಗಿದೆ. ಸಮುದಾಯ ಅಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಆಶ್ರಯದಲ್ಲಿ ಬುಧವಾರ ಸಂಜೆ ಹಿಂದೂ ದೇವಾಲಯದ ಅಧಿಕೃತ ಉದ್ಘಾಟನಾ ಸಮಾರಂಭ ನಡೆದಿದೆ.

Dubai Hindu temple

ದೀಪಾವಳಿ ಹಬ್ಬದ ನಂತರ ಪ್ರತಿನಿತ್ಯ ಆರತಿ ಕಾರ್ಯಕ್ರಮದೊಂದಿಗೆ ಈ ದೇವಸ್ಥಾನವನ್ನು ಮುಕ್ತವಾಗಿ ತೆರೆಯಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Dubai Hindu temple

2019 ರಲ್ಲಿ, ಯುಎಇ ಸರ್ಕಾರವು ದುಬೈನ ಜೆಬೆಲ್ ಅಲಿಯ ಆರಾಧನಾ ಗ್ರಾಮದಲ್ಲಿರುವ ಈ ದೇವಾಲಯಕ್ಕೆ ಭೂಮಿಯನ್ನು ಮಂಜೂರು ಮಾಡಿತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ದೇವಾಲಯದ ನಿರ್ಮಾಣವು ಮೂರು ವರ್ಷಗಳ ಕಾಲ ತೆಗೆದುಕೊಂಡಿತು.

Hindu Temple opens its doors in Worship Village of Dubai

Majestic Hindu temple opens in Dubai

ದೇವಾಲಯದಲ್ಲಿನ ವಿಶಿಷ್ಟ ವಾಸ್ತುಶಿಲ್ಪವು ಅದ್ಭುತವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ. ದೇವಾಲಯವನ್ನು ಒಟ್ಟು 80 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಗುರು ಗ್ರಂಥ ಸಾಹಿಬ್ ಜೊತೆಗೆ ಶಿವ, ಕೃಷ್ಣ, ಗಣೇಶ ಮತ್ತು ಮಹಾಲಕ್ಷ್ಮಿ ಸೇರಿದಂತೆ 16 ದೇವತೆಗಳನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯವು ಒಂಬತ್ತು ಹಿತ್ತಾಳೆಯ ಗೋಪುರಗಳನ್ನು ಮತ್ತು ಹೊರಗಿನ ಗೋಪುರಗಳಲ್ಲಿ ಕಲಶಗಳನ್ನು ಹೊಂದಿದೆ. ಪ್ರಾರ್ಥನಾ ಮಂದಿರದಲ್ಲಿ 105 ಹಿತ್ತಾಳೆಯ ಗಂಟೆಗಳನ್ನು ಅಳವಡಿಸಲಾಗಿದೆ.

New Hindu temple opened on Dussehra in Dubai, see beautiful pics of the temple built on 72 thousand square feet

ಈ ದೇವಾಲಯಕ್ಕೆ ಭೇಟಿ ನೀಡಲು ಬಯಸುವವರು ದೇವಾಲಯದ ವೆಬ್‌ಸೈಟ್ ಮೂಲಕ ಮುಂಗಡ ಬುಕಿಂಗ್ ಮಾಡಬಹುದು. ಸಂದರ್ಶಕರು, ಭಕ್ತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಸಂದರ್ಶಕರ ಸಂಖ್ಯೆಯನ್ನು ನೀಡಿದ ನಂತರ ಅರ್ಧ ಗಂಟೆಯೊಳಗೆ ಸ್ಲಾಟ್‌ಗಳನ್ನು ಬುಕ್ ಮಾಡಬಹುದು. ದೇವಾಲಯವು ಬೆಳಿಗ್ಗೆ 6 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಜೊತೆಗೆ ಪ್ರವಾಸಿಗರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಯೇ ದೇವಾಲಯಕ್ಕೆ ಭೇಟಿ ನೀಡಬೇಕು.

Inside Photos of Dubai's 70,000-square-ft Majestic Hindu Temple

Majestic Hindu temple opens in Dubai | The Times of India

The Stunning New Temple In Dubai's Jebel Ali Will Open Its Gates To Worshippers In 2022

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!