Monday, July 4, 2022

Latest Posts

ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ; ಯುವತಿ ದುರ್ಮರಣ

ಹೊಸದಿಗಂತ ವರದಿ, ಮೈಸೂರು:
ನಗರದ ರಿಂಗ್ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಎರಡು ಸ್ಕೂಟರ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವತಿ ಮೃತಪಟ್ಟಿದ್ದಾರೆ.
ಪೊಲೀಸ್ ಬಡಾವಣೆ ಮೂರನೇ ಹಂತದ ನಿವಾಸಿ , ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಲಕ್ಷ್ಮೀಪತಿ ಎಂಬವರ ಪತ್ರಿ ಲತಾ (24) ಮೃತಪಟ್ಟವರು.
ಖಾಸಗಿ ಕಂಪನಿಯೊಂದರಲ್ಲಿ ಆರ್ಕಿಟೆಕ್ಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಕೆಲಸಕ್ಕೆ ಹೋಗುತ್ತಿದ್ದ ವೇಳೆ ರಿಂಗ್ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬಂಡಿಪಾಳ್ಯ ಕಡೆಯಿಂದ ವೇಗವಾಗಿ ಬಂದ ಸ್ಕೂಟಿಯೊಂದು ಡಿಕ್ಕಿ ಹೊಡೆದಿದೆ.
ಇದರಿಂದ ಕೆಳಕ್ಕೆ ಬಿದ್ದ ಲತಾ ಅವರ ತಲೆಯ ಭಾಗಕ್ಕೆ ತೀವ್ರತರವಾದ ಪೆಟ್ಟಾಗಿದೆ. ಈ ವೇಳೆ ಸಾರ್ವಜನಿಕರು ತಕ್ಷಣ ಸಮೀಪದ ನಿರ್ಮಲಾ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರ ವೇಳೆಗೆ ಪ್ರಾಣ ಹೋಗಿದೆ.
ಪ್ರಕರಣ ಸಂಬಂಧ ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಟರಾಜ್ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss