SHOCKING | ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಕಟ್ಟಡಗಳ ಅವಶೇಷಗಳಡಿ ಇನ್ನಷ್ಟು ಜನರಿರುವ ಸಾಧ್ಯತೆ ಇದೆ, ಈಗಾಗಲೇ 12 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫತೇಪುರ್ ಪಟ್ಟಣದ ಹಮೀಶ್ ಕಟ್ಟಡ ಕುಸಿದುಬಿದ್ದಿದ್ದು, ಕಟ್ಟಡದಲ್ಲಿ 19 ಮಂದಿ ಇದ್ದರು ಎನ್ನಲಾಗಿದೆ. ರೋಶ್ನಿ ಬಾನು ಹಾಗೂ ಹಕೀಮುದ್ದೀನ್ ಮೃತರು. ಬೆಳಗಿನ ಜಾವ ಮೂರು ಗಂಟೆಗೆ ಕಟ್ಟಡ ಕುಸಿದಿದ್ದ ಕಾರಣ ಕಟ್ಟಡದೊಳಗಿನ ಜನ ನಿದ್ದೆಯಲ್ಲಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಟ್ಟಡ ಕುಸಿದ ಹತ್ತು ನಿಮಿಷದಲ್ಲಿ ನಮಗೆ ಮಾಹಿತಿ ಸಿಕ್ಕಿತ್ತು, 19 ಜನರಲ್ಲಿ 12 ಜನರನ್ನು ರಕ್ಷಿಸಿದ್ದೇವೆ. ಎಸ್‌ಡಿಆರ್‌ಎಫ್ ತಂಡ ಈಗಾಗಲೇ ಸ್ಥಳದಲ್ಲಿದೆ, ಇನ್ನೇನು ಶೀಘ್ರವೇ ಎನ್‌ಡಿಆರ್‌ಎಫ್ ತಂಡ ಆಗಮಿಸಲಿದೆ ಎಂದಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!