ಏಳು ರಾಜ್ಯಗಳಲ್ಲಿ ಒಟ್ಟು 14 ಮದುವೆಯಾಗಿದ್ದ ವ್ಯಕ್ತಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

60 ವರ್ಷದ ಆರೋಪಿ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಅಲ್ಲಿ ಮದುವೆಯಾಗಿ ಅವರ ಬಳಿ ಇರುವ ಹಣ ದೋಚಿ ಪರಾರಿಯಾಗುತ್ತಿದ್ದ. ಆರೋಪಿ ಒಡಿಶಾ ಮೂಲದವನಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪಿ ಹೇಳಿದ್ದಾನೆ. ಮ್ಯಾಟ್ರಿಮೊನಿ ಸೈಟ್‌ಗಳಿಂದ ಹೆಣ್ಣುಮಕ್ಕಳ ಪರಿಚಯ ಮಾಡಿಕೊಂಡಿದ್ದು, ತಾನು ಅವಿವಾಹಿತ ಎಂದು ಹೇಳಿಕೊಂಡಿದ್ದ. ಸದ್ಯ ಆತ ತನ್ನ 14 ನೇ ಹೆಂಡತಿ ಜೊತೆ ಒಡಿಶಾದಲ್ಲಿ ವಾಸವಾಗಿದ್ದ. ಈಕೆಗೆ ಗಂಡನ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!