Wednesday, December 6, 2023

Latest Posts

ಕಾಸರಗೋಡಿನ ಯುವ ಮುಂದಾಳು ಜ್ಯೋತಿಷ್ ಕುಮಾರ್ ನಿಧನ

ದಿಗಂತ ವರದಿ ಕಾಸರಗೋಡು:

ಕಾಸರಗೋಡಿನ ಯುವ ಮುಂದಾಳು, ಹಿಂದೂಗಳಿಗೆ ಶಕ್ತಿಯಾಗಿದ್ದ ಹಾಗೂ ಸಮಾಜದ್ರೋಹಿಗಳ ಪಾಲಿಗೆ ದುಃಸ್ವಪ್ನವಾಗಿದ್ದ ಅಣಂಗೂರು ಜೆ.ಪಿ.ನಗರ ಕಾಲನಿ ನಿವಾಸಿ ಜ್ಯೋತಿಷ್ ಕುಮಾರ್ (35) ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.
ವಿವಿಧ ಹಿಂದೂ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ಪ್ರಬಲ ಸಂಘಟನಾ ಕೌಶಲ್ಯ ಹೊಂದಿದ್ದರು. ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಕರಂದಕ್ಕಾಡು ಬಳಿಯ ಬಿಎಂಎಸ್ ಜಿಲ್ಲಾ ಕಾರ್ಯಾಲಯ ಪರಿಸರದಲ್ಲಿ ಮತ್ತು 12.30 ಕ್ಕೆ ಜೆ.ಪಿ.ನಗರದ ಕೇಸರಿ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ಮೃತರ ಮನೆಯಲ್ಲಿ ವಿಧಿ ವಿಧಾನಗಳು ಜರಗಿ ಪಾರೆಕಟ್ಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!