ಹೊಸದಿಗಂತ ವರದಿ ಪುತ್ತೂರು:
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ಮನೆಯ ಹಿತ್ತಲಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಮರದ ಗೆಲ್ಲು ತಲೆಗೆ ಬಡಿದು ಸ್ಥಳದಲ್ಲೇ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.
ಗುರುವಾರ ಸಂಜೆ ಸುಮಾರು 5 ಗಂಟೆಗೆ ಮನೆಯ ಹಿಂಬಾಗದಲ್ಲಿ ಮರ ಕಡಿಯುತ್ತಿದ್ದಾಗ ಮರದ ಗೆಲ್ಲೊಂದು ರಭಸದಿಂದ ಮೇಲಿಂದ ಕೆಳಗೆ ಬಂದಿದ್ದು ಕೆಳಗೆ ನಿಂತಿದ್ದ ವ್ಯಕ್ತಿಯ ಮುಖದ ಎಡಭಾಗಕ್ಕೆ ಬಡಿದು ಗಂಭೀರವಾಗಿ ಗಾಯಗೊಂಡರು.
ಘಟನೆಯಲ್ಲಿ ಗಂಭೀರ ಗಾಯಗೊಂಡ ದರ್ಬೆತ್ತಡ್ಕದ ಗುರಪ್ರಸಾದ್ ಎಂಬವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಪತ್ನಿ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.