September 22, 2026
Tuesday, September 22, 2026
spot_img

ಹೋರಿಗಳ ಕಾದಾಟಕ್ಕೆ ಸಿಲುಕಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಸಾ*ವು

ಹೊಸದಿಗಂತ ವರದಿ ಕಾರವಾರ:

ಬೀದಿಯಲ್ಲಿ ಕಾದಾಡುತ್ತಿದ್ದ ಎರಡು ಹೋರಿಗಳು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಗುದ್ದಿದ ಪರಿಣಾಮ ಆಕೆ ಮೃತಪಟ್ಟ ಘಟನೆ ತಾಲೂಕಿನ ಮಲ್ಲಾಪುರದಲ್ಲಿ ಸಂಭವಿಸಿದೆ.

ಮಲ್ಲಾಪುರ ನಿವಾಸಿ ರಾಜೇಶ್ವರಿ(29)ಮೃತ ದುರ್ದೈವಿಯಾಗಿದ್ದು, ಈಕೆ ಸುಭದ್ರ ಹೋಟೆಲ್ ಎದುರು ರಸ್ತೆ ಬದಿಯಿಂದ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಪಕ್ಕದಲ್ಲಿ ಎರಡು ಬಲಿಷ್ಠ ಹೋರಿಗಳು ಕಾದಾಟ ನಡೆಸುತ್ತಿದ್ದು, ವೇಗವಾಗಿ ಓಡಾಡಿಸಿಕೊಂಡು ಹೋಗುತ್ತಿದ್ದ ಹೋರಿಗಳು ಮಹಿಳೆಗೆ ಬಲವಾಗಿ ಗುದ್ದಿದ್ದರಿಂದ ಗಾಯಗೊಂಡು ರಸ್ತೆಯ ಮೇಲೆ ಬಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ  ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:

ಈ ಕುರಿತು ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !