ಹೊಸದಿಗಂತ ವರದಿ ಧಾರವಾಡ:
ಪ್ರೀತಿಸಿದ ಹುಡುಗಿ ವಿಷ ಸೇವಿಸಿ ಪ್ರಾಣ ಬಿಟ್ಟ ಬೆನ್ನಲ್ಲೇ, ಆಕೆಯ ಅಗಲಿಕೆ ತಾಳಲಾರದೆ ಪ್ರಿಯಕರನೂ ಸಹ ನೇಣಿಗೆ ಶರಣಾಗಿರುವ ದಾರುಣ ಘಟನೆ ಧಾರವಾಡದ ಕೊಟಬಾಗಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಮೇಘಾ ಗುಬ್ಬಣ್ಣವರ(20) ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದರೆ, ಈ ದುಃಖ ತಾಳಲಾರದೆ ಆಕೆಯ ಪ್ರಿಯಕರ ತರುಣ ಸಾಗರ್ (21) ಗುರುವಾರ ನಗರದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ:
ಪ್ರೇಮ ವಿಚಾರ ಕುರಿತಂತೆ ಮನಸ್ಥಾಪವಾಗಿ ಮೇಘಾ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ಈ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾದ ತರುಣ, ಗುರುವಾರ ಧಾರವಾಡ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



