ಹೊಸದಿಗಂತ ವರದಿ ಮಡಿಕೇರಿ:
ಹಾಡಹಗಲೇ ಕಾಡೆಮ್ಮೆ ತಿವಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಲಿಬೆಟ್ಟ ಸಮೀಪದ ಚನ್ನಂಗಿ ಗ್ರಾಮದಲ್ಲಿ ನಡೆದಿದೆ.
ಚನ್ನಂಗಿ ಕೋಟೆಮಚ್ಚಿ ಗ್ರಾಮದ ಶುಭಲಕ್ಷ್ಮಿ(25) ಕಾಡೆಮ್ಮೆ ದಾಳಿಯಿಂದ ಗಾಯಗೊಂಡ ಮಹಿಳೆ.
ಹಾಡಹಗಲೇ ಮನೆಯ ಸಮೀಪಕ್ಕೆ ಬಂದ ಕಾಡೆಮ್ಮೆ ಶುಭಲಕ್ಷ್ಮಿ ಮೇಲೆರಗಿದ್ದು,ಗಂಭಿರವಾಗಿ ಗಾಯಗೊಂಡಿರುವ ಆವರನ್ನು ಪಾಲಿಬೆಟ್ಟದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಡಾನೆ, ಹುಲಿ, ಚಿರತೆ ಹಾವಳಿಯಿಂದ ಕಂಗೆಟ್ಟಿರುವ ಕಾಡಂಚಿನ ನಿವಾಸಿಗಳು ಇದೀಗ ಕಾಡೆಮ್ಮೆ ದಾಳಿಯಿಂದ ಮತ್ತಷ್ಟು ಆತಂಕ್ಕೆ ಒಳಗಾಗಿದ್ದು, ವನ್ಯಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.