ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಟ್ಟಿನ ಹೊಟ್ಟೆನೋವಿನಿಂದ ಬಳಲುವ ಮಹಿಳೆಯರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಕೆಲವರ ದೇಹಕ್ಕೆ ಇದು ಒಗ್ಗುವುದಿಲ್ಲ. ಮುಟ್ಟಿನ ನೋವಿಗೆ ತೆಗೆದುಕೊಂಡ ಮಾತ್ರೆಯ ಅಡ್ಡಪರಿಣಾಮವಾಗಿ ಯುವತಿಯೊಬ್ಬಳು ಕೋಮಾಗೆ ಜಾರಿದ್ದಾಳೆ.
ಬ್ರೆಜಿಲ್ನ ಜಾಕ್ವೆಲಿನ್ ಗಮಾಕ್ ಎಂಬ ಯುವತಿ ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ್ದು, ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದ್ದು ಕೋಮಾಗೆ ಜಾರಿದ್ದಾಳೆ. ಯುವತಿ ಮುಟ್ಟಿನ ನೋವಿಗೆ ಐಬುಪ್ರೊಫೆನ್ ಮಾತ್ರೆ ಸೇವನೆ ಮಾಡಿದ್ದಾಳೆ. ಮಾತ್ರೆ ಸೇವಿಸಿದ ಕೆಲ ಹೊತ್ತಿನ ಬಳಿಕ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ಐಸಿಯುಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಕೋಮಾಗೆ ಜಾರಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದೀಗ ಆಕೆಯ ಆರೋಗ್ಯ ಸುಧಾರಣೆ ಆಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.