September 15, 2026
Tuesday, September 15, 2026
spot_img

ಕೇರಳದ ಯುವತಿಯ ಮುಕುಟಕ್ಕೆ ‘ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ’: ಜೈಪುರದಲ್ಲಿ ಮಿಂಚಿದ ಕಾಜಿಯಾ ಲಿಜ್ ಮೆಜೊ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಮೂಲದ 19 ವರ್ಷದ ಯುವತಿ ಕಾಜಿಯಾ ಲಿಜ್ ಮೆಜೊ, ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾಜಿಯಾ ಆಯ್ಕೆಯೊಂದಿಗೆ ಈ ಕಿರೀಟವನ್ನು ಮುಡಿಗೇರಿಸಿಕೊಂಡ ಕೇರಳದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮುಂದಿನ ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕಾನೂನು ವ್ಯಾಸಂಗದ ಜೊತೆಗೆ ಮಾಡೆಲಿಂಗ್

ಕೇರಳದ ಮಾವೇಲಿಕ್ಕರ ಮೂಲದ ಕಾಜಿಯಾ, ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ಅಬುಧಾಬಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿರುವ ಅವರು ಬಾಲ್ಯದಿಂದಲೇ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. 12ನೇ ವಯಸ್ಸಿನಲ್ಲೇ ‘ಮಿಸ್ ಟೀನ್ ದಿವ್ಯಾ 2024’ ಪ್ರಶಸ್ತಿ ಗೆದ್ದಿದ್ದ ಕಾಜಿಯಾ, ಬಳಿಕ ‘ಮಿಸ್ ಟೀನ್ ಇಂಟರ್‌ನ್ಯಾಷನಲ್ 2025’ ಸ್ಪರ್ಧೆಯಲ್ಲಿ ರನ್ನರ್‌ಅಪ್ ಸ್ಥಾನ ಪಡೆದಿದ್ದರು. ಈ ವರ್ಷ ‘ಮಿಸ್ ಯೂನಿವರ್ಸ್ ಕೇರಳ 2026’ ಕಿರೀಟವನ್ನೂ ತಮ್ಮದಾಗಿಸಿಕೊಂಡಿದ್ದರು.

ನೃತ್ಯ, ಗಾಯನದಲ್ಲೂ ಪ್ರತಿಭೆ

ಮಾಡೆಲಿಂಗ್ ಕ್ಷೇತ್ರದ ಜೊತೆಗೆ ಕಾಜಿಯಾ ಅವರಿಗೆ ಕಲೆಯಲ್ಲೂ ವಿಶೇಷ ಆಸಕ್ತಿ ಇದೆ. ಸುಮಾರು 12 ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿರುವ ಅವರು ಗಾಯನದಲ್ಲೂ ಆಸಕ್ತಿ ಹೊಂದಿದ್ದಾರೆ. ಡ್ರಮ್ಸ್ ಹಾಗೂ ವಯಲಿನ್ ನುಡಿಸುವ ಕೌಶಲ್ಯವೂ ಅವರಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !