ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬರು ಹಾಯಾಗಿ ಕುಳಿತು ಸಿಗರೇಟ್ ಸೇದಿ ಎಲ್ಲರನ್ನು ಆತಂಕಕ್ಕೀಡುಮಾಡಿದ್ದಾರೆ.
ಬೆಂಗಳೂರಿಗೆ ಬಂದಿಳಿದ ತಕ್ಷಣ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕ ವಿಮಾನದ ಶೌಚಾಲಯದಲ್ಲಿ ಕುಳಿತು ಸಿಗರೇಟ್ ಸೇದಿದ್ದಾರೆ. ಡಸ್ಟ್‌ಬಿನ್‌ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿದ್ದು, ಆಕೆಯನ್ನು ವಶಕ್ಕೆ ಪಡೆಯಲಾಗಿದೆ.
ಇತರರ ಜೀವ ಹಾಗೂ ಸುರಕ್ಷತೆಗೆ ಅಪಾಯ ಸೃಷ್ಟಿಸಿದ ಆರೋಪದ ಅನ್ವಯ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.