October 10, 2026
Saturday, October 10, 2026
spot_img

ಗೌರಿ ಜೊತೆ ಎರಡು ವರ್ಷದ ಪ್ರೀತಿಗೆ ಅಧಿಕೃತ ಮುದ್ರೆ ಹಾಕ್ತಿದ್ದೀವಿ ಎಂದ ಆಮೀರ್‌ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ವರ್ಷದ ಪ್ರೀತಿಯ ನಂತರ ಇದೀಗ ನಾನು ಗೌರಿ ಮದುವೆ ಆಗ್ತಿದ್ದೇವೆ ಎಂದು ನಟ ಆಮೀರ್‌ ಖಾನ್‌ ಹೇಳಿದ್ದಾರೆ. ಇದೇ ಜುಲೈ 5ರಂದು ಗೌರಿ ಜೊತೆ ಹಸೆಮಣೆ ಏರುತ್ತಿರುವುದು ನಿಜ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆಯಷ್ಟೇ ಗೌರಿ ಹಾಗೂ ಆಮೀರ್‌ ಖಾನ್‌ ಮದುವೆಯಾಗ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಖುದ್ದು ಆಮೀರ್‌ ಖಾನ್‌ ಸ್ಪಷ್ಟನೆ ನೀಡಿದ್ದು, ಎರಡು ವರ್ಷ ಪ್ರೀತಿಸಿದ್ದೇವೆ. ಮದುವೆಯಾಗೋಕೆ ನಿರ್ಧರಿಸಿದ್ದೇವೆ. ಖಾಸಗಿಯಾಗಿ ಸರಳವಾಗಿ ಮದುವೆಯಾಗುತ್ತಿದ್ದೇವೆ ಎಂದಿದ್ದಾರೆ.

ಆಪ್ತರು, ಕುಟುಂಬದವರ ಜೊತೆ ರಿಜಿಸ್ಟರ್‌ ಮ್ಯಾರೇಜ್‌ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ. ಅನಗತ್ಯ ಪ್ರಚಾರ ಬೇಡ.ಅದ್ಧೂರಿ ರಿಸೆಪ್ಷನ್‌ ಅಥವಾ ಪಾರ್ಟಿ ಕೂಡ ಇಲ್ಲ. ಮನಸಾರೆ ನಮಗೆ ಒಳಿತನ್ನು ಬಯಸುವ ಆಪ್ತರ ಜೊತೆ ಇಡೀ ದಿನ ಕಳೆಯಲಿದ್ದೇವೆ ಎಂದು ಹೇಳಿದ್ದಾರೆ.

ಗೌರಿ ಬೆಂಗಳೂರು ಮೂಲದವರು ಇದೀಗ ಮುಂಬೈನಲ್ಲಿ ಸಲೂನ್‌ ಒಂದನ್ನು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇವರಿಗೆ ಏಳು ವರ್ಷದ ಮಗು ಇದೆ ಎಂದೂ ಹೇಳಲಾಗುತ್ತಿದೆ. ಗೌರಿ ಹಾಗೂ ಆಮೀರ್‌ ಖಾನ್‌ ಸತತ ಎರಡು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ.

Must Read