Saturday, September 23, 2023

Latest Posts

ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿ ಪೂರ್ಣ ಬಹುಮತ: ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಎಎಪಿ, ಪಕ್ಷೇತರರು ಸೇರ್ಪಡೆ

ಹೊಸದಿಗಂತ ವರದಿ,ವಿಜಯನಗರ:

ಬಿಜೆಪಿ ತತ್ವ, ಸಿದ್ಧಾಂತ ಮೆಚ್ಚಿ ನಗರಸಭೆ ಎಎಪಿ ಒಬ್ಬ ಸದಸ್ಯರು ಸೇರಿದಂತೆ 9ಜನ ಪಕ್ಷೇತರ ಸದಸ್ಯರು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ‌ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ನಗರದ ಪ್ರಿಯದರ್ಶಿನಿ ಹೋಟೆಲ್ ಸಭಾಂಗಣದಲ್ಲಿ ‌ಬಿಜೆಪಿ ಆಶ್ರಯದಲ್ಲಿ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಬಿಜೆಪಿ ಸೇರ್ಪಡೆಯಾಗುವ‌ ಮೂಲಕ ಬಿಜೆಪಿ ಪಕ್ಷಕ್ಕೆ ಹಾಗೂ ಆನಂದ್ ಸಿಂಗ್ ಅವರ ಕೈ‌ ಬಲಪಡಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ‌ಮಧ್ಯೆ ತೀವ್ರ ಪೈಪೋಟಿ ನಡೆದಿದ್ದ, ನಗರಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೂ ಪೂರ್ಣ ಬಹುಮತ ದೊರೆತಿರಲಿಲ್ಲ, ಒಟ್ಟು 35 ಸ್ಥಾನಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 10, ಎಎಪಿ 1 ಹಾಗೂ 12‌ಜನ ಪಕ್ಷೇತರರು ಆಯ್ಕೆಯಾಗಿದ್ದರು. ಬಿಜೆಪಿ ತತ್ವ ಹಾಗೂ ಸಿದ್ದಾಂತ ಮೆಚ್ಚಿ 9 ಜನ ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದು, ಅಧಿಕಾರದ ಗದ್ದುಗೆಗೆ ಏರಬೇಕು ಎನ್ನುವ ಬಿಜೆಪಿ ‌ಕನಸು ನನಸಾಗಿದೆ. ಈ ಸಂದರ್ಭದಲ್ಲಿ ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್, ಬಿಜೆಪಿ ‌ಮಂಡಲ ಅಧ್ಯಕ್ಷ ಬಸವರಾಜ್ ನಾಲತ್ವಾಡ್, ಹೊಸಪೇಟೆ ‌ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು, ನೂತನ ಸದಸ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಚಿವ ಆನಂದ್ ಸಿಂಗ್ ಅವರು, ಪಕ್ಷಕ್ಕೆ ಸೇರ್ಪಡೆಯಾದವರಿಗೆ ಬಿಜೆಪಿ ಶಾಲು‌ ಹೊದಿಸಿ, ಸನ್ಮಾನಿಸಿ ಗೌರವಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!