ಏಕದಿನ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಆಸಿಸ್‌ ನಾಯಕ ಆ್ಯರೋನ್ ಫಿಂಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದ ಸೀಮಿತ ಓವರ್‌ ಗಳ ಕ್ರಿಕೆಟ್‌ ತಂಡದ ನಾಯಕ ಆರನ್ ಫಿಂಚ್ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಸೆಪ್ಟೆಂಬರ್ 11 ರಂದು ಕೇರ್ನ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯವು ಅವರ ಕೊನೆಯ ಪಂದ್ಯವಾಗಿರಲಿದೆ. 35 ವರ್ಷದ ಫಿಂಚ್ ನಿವೃತ್ತಿಯಿಂದಾಗಿ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್‌ನಲ್ಲಿ ಕಾಂಗರೂಗಳು ಹೊಸ ನಾಯಕತ್ವದ ಅಡಿಯಲ್ಲಿ ಕಾಣಕ್ಕಿಳಿಯುವುದು ಖಚಿತವಾಗಿದೆ. ಫಿಂಚ್‌ ಅವರು ಟಿ.20 ತಂಡದ ನಾಯಕರಾಗಿ ಮುಂದುವರೆಯಲಿದ್ದು, ಸ್ವದೇಶದಲ್ಲಿ ಈ ವರ್ಷ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ಗೆ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ಪರ 145 ಏಕದಿನ ಪಂದ್ಯಗಳನ್ನಾಡಿರುವ ಫಿಂಚ್, ಇತ್ತೀಚಿನ ಪಂದ್ಯಗಳಲ್ಲಿ ಫಾರ್ಮ್‌ಗಾಗಿ ಪರದಾಡುತ್ತಿದ್ದರು. ಅವರು ಆಡಿದ ಕೊನೆಯ ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 26 ರನ್ ಗಳಿಸಿದ್ದಾರೆ.
ನಿವೃತ್ತಿ ಕುರಿತಾಗಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಫಿಂಚ್ “ಇದೊಂದು ಕೆಲವು ನಂಬಲಾಗದ ನೆನಪುಗಳೊಂದಿಗಿನ ಅದ್ಭುತ ಸವಾರಿಯಾಗಿದೆ. ಅತ್ಯುತ್ತಮ ಏಕದಿನ ತಂಡದ ಭಾಗವಾಗಿರಲು ನಾನು ಅತ್ಯಂತ ಅದೃಷ್ಟಶಾಲಿಯಾಗಿದ್ದೇನೆ. ನನ್ನ ವೃತ್ತಿಜೀವನವು ಎಲ್ಲರಿಂದ ಮತ್ತು ತೆರೆಮರೆಯಲ್ಲಿರುವ ಅನೇಕ ಜನರಿಂದ ಆಶೀರ್ವದಿಸಲ್ಪಟ್ಟಿದೆ.””ಮುಂದಿನ (50-ಓವರ್) ವಿಶ್ವಕಪ್‌ಗೆ ತಯಾರಿ ನಡೆಸಲು ಮತ್ತು ಗೆಲ್ಲಲು ಹೊಸ ನಾಯಕನಿಗೆ ಅತ್ಯುತ್ತಮವಾದ ಅವಕಾಶವನ್ನು ನೀಡುವ ಸಮಯ ಇದು. ಈ ಹಂತಕ್ಕೆ ನನ್ನ ಪ್ರಯಾಣಕ್ಕೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ.”  ಎಂದು ಬರೆದುಕೊಂಡಿದ್ದಾರೆ.
ಫಿಂಚ್‌ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯ ಸಿಇಒ ನಿಕ್ ಹಾಕ್ಲಿ, “ಆಸ್ಟ್ರೇಲಿಯನ್ ಕ್ರಿಕೆಟ್ ಪರವಾಗಿ ಫೀಂಚ್‌ ಅವರಿಗೆ ಧನ್ಯವಾದ. ಆರನ್ ಅವರು ಆಸ್ಟ್ರೇಲಿಯನ್ ಪುರುಷರ ಏಕದಿನ ತಂಡದ ನಾಯಕರಾಗಿ ಮತ್ತು 50-ಓವರ್‌ಗಳ ಮಾದರಿಯ ಆರಂಭಿಕರಾಗಿ ಅವರ ಅಪಾರ ಕೊಡುಗೆಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!