ಸಫಾರಿ ಜೀಪನ್ನು ಬೆನ್ನಟ್ಟಿದ ಸಲಗ: ಎದೆ ಝಲ್‌ ಎನಿಸುವ ದೃಶ್ಯ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಂಗಲ್ ಸಫಾರಿ ಪ್ರವಾಸಿಗರಿಗೆ ರೋಮಾಂಚನಕಾರಿ. ಜೀಪ್ ಅಥವಾ ವಿಶೇಷ ವಾಹನಗಳ ಮೂಲಕ ಕಾಡುಗಳಲ್ಲಿ ಸಂಚರಿಸಿ ಪ್ರಾಣಿಗಳನ್ನು ಹತ್ತಿರದಿಂದ ನೋಡುವುದು ಒಂದು ಆನಂದ. ಆದರೆ ಕೆಲವೊಮ್ಮೆ ಇದು ಪ್ರಾಣಾಪಾಯಕ್ಕೂ ದಾರಿ ಮಾಡಿಕೊಡುತ್ತದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಸಫಾರಿ ಜೀಪನ್ನು ಸಲಗವೊಂದು ಬೆನ್ನಟ್ಟಿದ ವಿಡಿಯೋ ಎದೆ ಝಲ್‌ ಎನಿಸುವ ಹಾಗಿದೆ.

ಆನೆಯ ಉಕ್ರೋಶಕ್ಕೆ ಜೀಪಿನಲ್ಲಿದ್ದ ಪ್ರವಾಸಿಗರು ತತ್ತರಿಸಿ ಹೋಗಿದ್ದಾರೆ. ಜೀಪ್ ಚಾಲಕ ಸಮಯಪ್ರಜ್ಞೆಯಿಂದ ಎಲ್ಲರ ಪ್ರಾಣ ಬಚಾವ್‌ ಆಗಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!