Wednesday, September 28, 2022

Latest Posts

ಮುನ್ನೆಚ್ಚರಿಕೆ ಪರಮಾಣು ದಾಳಿಗೆ ಕಾನೂನು ಅಂಗೀಕರಿಸಿದ ಉತ್ತರ ಕೊರಿಯಾ: ಫ್ರಾನ್ಸ್‌ ನಿಂದ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿನ ಬೆಳವಣಿಗೆಗಳಲ್ಲಿ ಉತ್ತರಕೊರಿಯಾವು ಯುದ್ಧ ಸನ್ನದ್ಧತೆಯ ಹೊಸ ಕಾನೂನೊಂದನ್ನು ಉತ್ತರ ಕೊರಿಯಾವು ಅಂಗೀಕರಿಸಿದ್ದು ಇದನ್ನು ಫ್ರಾನ್ಸ್‌ ಖಂಡಿಸಿದೆ. ಇದು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಎಂದು ಫ್ರಾನ್ಸ್‌ ಹೇಳಿದೆ.

ಸಾಂಪ್ರದಾಯಿಕ ದಾಳಿಗಳನ್ನೂ ಒಳಗೊಂಡಂತೆ ಮುನ್ನೆಚರಿಕೆಯಾಗಿ ʼತಡೆಗಟ್ಟುವ ದಾಳಿʼಗಳಿಗೆ ಅವಕಾಶನೀಡುವ ಕಾನೂನನ್ನು ಪ್ಯೊಂಗ್ಯಾಂಗ್ ಅಂಗೀಕರಿಸಿದೆ ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮವು ಶುಕ್ರವಾರ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್‌ ನ ಖಂಡನೆ ವ್ಯಕ್ತವಾಗಿದೆ. ಏಕೆಂದರೆ ಇದು ಮುನ್ನೆಚ್ಚರಿಕೆಯಾಗಿ ಪರಮಾಣು ದಾಳಿಗೂ ಅನುವು ಮಾಡುಕೊಡುತ್ತದೆ.

“ಉತ್ತರ ಕೊರಿಯಾದ ಈ ಕ್ರಮವು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯನ್ನು ಪ್ರತಿನಿಧಿಸುತ್ತದೆ. ಫ್ರಾನ್ಸ್‌ ಈ ಬೆಳವಣಿಗೆಗಳನ್ನು ಕಾಳಜಿಯಿಂದ ಗಮನಿಸುತ್ತದೆ” ಎಂದು ಫ್ರಾನ್ಸ್‌ ನ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಪ್ಯೊಂಗ್ಯಾಂಗ್‌ನ ಈ ಕ್ರಮವು ಪರಮಾಣು ನಿಶಸ್ತ್ರೀಕರಣದ ಮಾತುಕತೆಗಳ ಸಾಧ್ಯತೆಗೆ ದಕ್ಕೆಯುಂಟು ಮಾಡುತ್ತದೆ ಎನ್ನಲಾಗಿದೆ. ಆದರೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಪರಮಾಣು ರಾಷ್ಟ್ರವಾಗಿ ದೇಶದ ಸ್ಥಾನಮಾನವನ್ನುನೀಗ ಬದಲಾಯಿಸಲಾಗದು ಎಂದು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!