Sunday, October 1, 2023

Latest Posts

ಆರ್‌ ಸಿಬಿ ಗೆ ಕೋಚ್‌ ಆಗಲಿದ್ದಾರಾ ಎಬಿ ಡಿ ವಿಲಿಯರ್ಸ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿ ವಿಲಿಯರ್ಸ್ ಎಲ್ಲಾ ಪ್ರಕಾರಗಳ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದರು. ಆದರೆ ಈಗ ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ.
15 ವರ್ಷಗಳಿಗಿಂತ ಹೆಚ್ಚು ಕಾಲ ಕ್ರಿಕೆಟ್‌ ಕ್ಷೇತ್ರದಲ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ಇಡೀ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಎಬಿಡಿ.  ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ಐಪಿಎಲ್‌ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರಾಗಿದ್ದರು.
ಇದೀಗ ಈ ಚಾಂಪಿಯನ್‌ ಮತ್ತೆ ಕ್ರಿಕೆಟ್‌ ಕಡೆ ಗಮನ ಹರಿಸಲು ಮನಸ್ಸು ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಅಥವಾ ಆರ್ ಸಿಬಿ ತಂಡದಲ್ಲಿ ಯಾವುದಾದರೂ ಒಂದು ಜವಾಬ್ದಾರಿ ನಿರ್ವಹಿಸಲು ಇಚ್ಛಿಸುತ್ತೇನೆ. ಕೆಲವು ವರ್ಷಗಳಿಂದ ಹೊಸ ಯುವ ಆಟಗಾರರಿಗೆ ಟ್ರೈನಿಂಗ್‌ ನೀಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಈ ಬಳಿಕ ಎಬಿಡಿ ಆರ್‌ ಸಿಬಿಗೆ ಕೋಚ್‌ ಆಗಿ ಬರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಆರ್‌ ಸಿಬಿ ಯಾಗಲೀ, ಎಬಿಡಿಯಾಗಲೀ ಯಾವುಋ ಸ್ಪಷ್ಟನೆ ನೀಡಿಲ್ಲ.
ಎಬಿಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!