ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ವನಮಾ ವೆಂಕಟೇಶ್ವರ ರಾವ್ ಪುತ್ರ ವನಮಾ ರಾಘವೇಂದ್ರ ರಾವ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಮತ್ತು ಅವರ ಕುಟುಂಬದ ಮೂವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕೊತೆಗುಡಂ ಉದ್ಯಮಿ ರಾಮಕೃಷ್ಣನ್ ಅವರ ಪತ್ನಿ ಮತ್ತು ಅವಳಿ ಮಕ್ಕಳು ಗ್ಯಾಸ್ ಸಿಲಿಂಡರ್ ತೆರೆದಿಟ್ಟು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ರಾಮಕೃಷ್ಣನ್ ವಿಡಿಯೋ ಒಂದನ್ನು ಮಾಡಿದ್ದು, ರಾಘವೇಂದ್ರ ರಾವ್ ನನ್ನ ಪತ್ನಿಯನ್ನು ಕಳಿಸಿಕೊಡಲು ಕೇಳಿದ್ದರು. ನಮಗೆ ಕಿರುಕುಳ ನೀಡಿದ್ದರು ಎಂದು ಹೇಳಿದ್ದರು.
ವಿಡಿಯೋ ಆಧಾರದ ಮೇಲೆ ಪೊಲೀಸರು ರಾಘವೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದಾದ ನಂತರದಿಂದ ರಾಘವೇಂದ್ರ ಕಾಣೆಯಾಗಿದ್ದರು. ಪೊಲೀಸರು ಪತ್ತೆಗಾಗಿ ತಂಡ ರಚಿಸಿದ್ದು, ಬಂಧಿಸಲಾಗಿದೆ.