Thursday, December 8, 2022

Latest Posts

ಸುಭಾಷರ ಅಜಾದ್‌ ಹಿಂದ್ ಪಡೆಯ ಸೈನಿಕ ಅಭಿ ಸಿಂಗ್ ವಿದೇಶಗಳಲ್ಲಿದ್ದು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ್ದರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಭಿ ಸಿಂಗ್ ನೇಗಿ ಅವರು ಉತ್ತರಖಂಡ್‌ ನ ಉತ್ತರಕಾಶಿಯ ಕುಮೋಲಾ ಗ್ರಾಮದಲ್ಲಿ 1912 ರಲ್ಲಿ ಜನಿಸಿದರು. ಅವರ ತಂದೆ ಪಾರ್ ಸಿಂಗ್, ನೇಗಿ ಅವರ ಕುಟುಂಬ ಹಳ್ಳಿಯಲ್ಲಿ ಸಾಂಪ್ರದಾಯಿಕ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿತ್ತು. ಅಭಿ ಸಿಂಗ್‌ ನೇಗಿ ವಿದ್ಯಾಭ್ಯಾಸದ ಬಳಿಕ 1932 ರಲ್ಲಿ ರಾಯಲ್ ಗರ್ವಾಲ್ ರೈಫಲ್‌ ಪಡೆಗೆ ನೇಮಕಗೊಂಡರು. 1939 ರಲ್ಲಿ ಎರಡನೇ ಮಹಾಯುದ್ಧದ ಆರಂಭದಲ್ಲಿ ಅವರನ್ನು ಆಗ್ನೇಯ ಏಷ್ಯಾದ ಮಲಯಾ ಮತ್ತು ಸಿಂಗಾಪುರ್ ದೇಶಗಳಲ್ಲಿ ಯುದ್ಧಕ್ಕೆ ಕಳುಹಿಸಲಾಯಿತು.
ಆ ವೇಳೆಗೆ ಆ ದೇಶಗಳು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿತ್ತು ಆದರೆ ಜಪಾನಿನ ಸೈನ್ಯದಿಂದ ಆಕ್ರಮಿಸಲ್ಪಟ್ಟಿತು. ಜಪಾನಿನ ಆಕ್ರಮಣವನ್ನು ಎದುರಿಸಲು ಬ್ರಿಟಿಷ್ ಭಾರತೀಯ ಸೇನೆಯಾದ ರಾಯಲ್ ಗರ್ವಾಲ್ ರೈಫಲ್‌ನ ಸೈನಿಕರನ್ನು ಈ ದೇಶಗಳಿಗೆ ಕಳುಹಿಸಲಾಗಿತ್ತು. ಅಭಿ ಸಿಂಗ್ ನೇಗಿ ಜಪಾನಿಯರೊಡನೆ ಹೋರಾಡುತ್ತಿದ್ದಾಗ ಆತನನ್ನು ಸೆರೆಹಿಡಿಯಲಾಯಿತು. 1941 ರಲ್ಲಿ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ  ರೂಪುಗೊಂಡ ಸುಭಾಷರ ಆಜಾದ್ ಹಿಂದ್ ಫೌಜ್ ಸೇರಿದರು. ಯುದ್ಧದ ಸಮಯದಲ್ಲಿ ಉಂಟಾದ ಗಂಭೀರ ಗುಂಡಿನ ಗಾಯಗಳಿಂದಾಗಿ ಅವರು ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರವೇ ಮದುವೆಯಾದರು. ಅವರು ಮಾರ್ಚ್ 1972 ರಲ್ಲಿ ನಿಧನರಾದರು. ಆಜಾದ್ ಹಿಂದ್ ಫೌಜ್‌ನಲ್ಲಿನ ಸೇವೆಯ ಪುರಾವೆಯಾಗಿ, ಅವರಿಗೆ ಪದಕವನ್ನು ನೀಡಲಾಗಿತ್ತು. ಇದರಲ್ಲಿ 1939 ರಿಂದ 1945 ರ ಅವಧಿಯನ್ನು ಉಲ್ಲೇಖಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!