August 1, 2026
Saturday, August 1, 2026
spot_img

ವಿಮಾನಯಾನದ ವೇಳೆ ದುರಂತ: ಆಕಾಶದಲ್ಲೇ ಆರು ವರ್ಷದ ಪುಟ್ಟ ಬಾಲಕಿ ಹೃದಯಾಘಾತಕ್ಕೆ ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನವಿ ಮುಂಬೈನಿಂದ ಕೇರಳದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಆರು ವರ್ಷದ ಹೆಣ್ಣು ಮಗುವೊಂದು ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಜುಲೈ 25 ರಂದು ಇಂಡಿಗೋ ಸಂಸ್ಥೆಯ ‘6E 2040’ ವಿಮಾನದಲ್ಲಿ ಈ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿತ್ತು. ಈ ವಿಮಾನವು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಿಂದ ಬೆಳಿಗ್ಗೆ 10:30 ಕ್ಕೆ ಸರಿಯಾಗಿ ಹೊರಟಿತ್ತು. ಮಧ್ಯಾಹ್ನ ಸುಮಾರು 12:30 ರ ಸುಮಾರಿಗೆ ವಿಮಾನವು ತಿರುವನಂತಪುರಂ ನಿಲ್ದಾಣವನ್ನು ತಲುಪುವ ಅಂತಿಮ ಹಂತದಲ್ಲಿದ್ದಾಗ ಮಗುವಿಗೆ ಹಠಾತ್ ಹೃದಯಾಘಾತವಾಗಿದೆ.

ವೈದ್ಯರ ಸತತ ಪ್ರಯತ್ನ ವಿಫಲ:

ಮಗುವಿನ ಆರೋಗ್ಯ ಹದಗೆಡುತ್ತಿದ್ದಂತೆ ವಿಮಾನದ ಸಿಬ್ಬಂದಿ ತಕ್ಷಣ ನೆರವಿಗಾಗಿ ಧಾವಿಸಿದರು. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ವೈದ್ಯರು ಮಗುವನ್ನು ಉಳಿಸಲು ಸುಮಾರು ಒಂದು ಗಂಟೆಯ ಕಾಲ ಸತತವಾಗಿ ಸಿಪಿಆರ್ ಪ್ರಕ್ರಿಯೆಯನ್ನು ನಡೆಸಿದರು. ವಿಮಾನದ ಸಿಬ್ಬಂದಿ ಸಹ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿ ಸಂಪೂರ್ಣವಾಗಿ ಸಹಕರಿಸಿದರು. ಆದರೆ ವೈದ್ಯರು ಮತ್ತು ಸಿಬ್ಬಂದಿಯ ಸತತ ಪ್ರಯತ್ನಗಳ ಹೊರತಾಗಿಯೂ, ವಿಮಾನವು ಭೂಸ್ಪರ್ಶ ಮಾಡುವ ಮುನ್ನವೇ ಮಗು ಕೊನೆಯುಸಿರೆಳೆದಿದೆ.

ಇದನ್ನೂ ಓದಿ:

ವಿಮಾನದಲ್ಲಿದ್ದ ಸಹಪ್ರಯಾಣಿಕರೊಬ್ಬರು ಈ ಆತಂಕದ ಕ್ಷಣಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವನ್ನು ಉಳಿಸಲು ವೈದ್ಯರು ಮತ್ತು ವಿಮಾನದ ಸಿಬ್ಬಂದಿ ತೋರಿದ ವೃತ್ತಿಪರತೆ ಹಾಗೂ ಶ್ರಮವನ್ನು ಶ್ಲಾಘಿಸಿದ್ದಾರೆ. ಹೆತ್ತ ಕರುಳಿನ ಮುಂದೆಯೇ ಪುಟ್ಟ ಮಗು ಪ್ರಾಣಬಿಟ್ಟ ಘಟನೆ ಇಡೀ ವಿಮಾನದಲ್ಲಿದ್ದವರನ್ನು ಕಣ್ಣೀರಿಡುವಂತೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !