September 17, 2026
Thursday, September 17, 2026
spot_img

ಪ್ರತಿಭಟನೆ ವೇಳೆ ಅವಘಡ: ಟೈರ್‌ಗೆ ಬೆಂಕಿ ಹಚ್ಚುವಾಗ ಬಿಜೆಪಿ ಕಾರ್ಯಕರ್ತನ ಪ್ಯಾಂಟ್‌ಗೆ ಬೆಂಕಿ

ಹೊಸದಿಗಂತ ವರದಿ ಗದಗ:

ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಸಣ್ಣ ಅವಘಡ ಸಂಭವಿಸಿದೆ. ಟೈರ್‌ಗೆ ಬೆಂಕಿ ಹಚ್ಚಲು ಕಾರ್ಯಕರ್ತರು ಮುಂದಾದಾಗ ಬಿಜೆಪಿ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಅದೃಷ್ಟವಶಾತ್‌ ಅಲ್ಪ ಪ್ರಮಾಣದಲ್ಲಿ ಬೆಂಕಿ ತಾಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ವಂದೇ ಮಾತರಂ ಗೀತೆಗೆ ಕಾಂಗ್ರೆಸ್‌ ನಾಯಕರು ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:

ಈ ವೇಳೆ ಕಾಂಗ್ರೆಸ್‌ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ತೀವ್ರಗೊಳಿಸಲು ಮುಂದಾದರು. ಪೊಲೀಸರು ಟೈರ್‌ ತೆರವುಗೊಳಿಸಲು ಮುಂದಾದಾಗ ಸ್ಥಳದಲ್ಲಿ ನೂಕಾಟ ಉಂಟಾಯಿತು. ಇದೇ ವೇಳೆ ಕಾರ್ಯಕರ್ತರು ಏಕಾಏಕಿ ಮುನ್ನುಗ್ಗಿದ ಪರಿಣಾಮ ಒಬ್ಬ ಕಾರ್ಯಕರ್ತನ ಪ್ಯಾಂಟ್‌ಗೆ ಬೆಂಕಿ ತಾಗಿದೆ.

ತಕ್ಷಣವೇ ಬೆಂಕಿ ನಂದಿಸಲಾಗಿದ್ದು, ಯಾವುದೇ ಗಂಭೀರ ಗಾಯ ಸಂಭವಿಸಿಲ್ಲ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !