ಹೊಸವರ್ಷದ ಮೊದಲ ದಿನ ‘ನಮ್ಮ ಮೆಟ್ರೋ’ ಗಳಿಸಿದ ಆದಾಯ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಹೊಸ ವರ್ಷದಂದು ನಮ್ಮ ಮೆಟ್ರೋಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆದಾಯ ಬಂದಿದೆ.
ಹೌದು, ಹೆಚ್ಚು ಮಂದಿ ತಮ್ಮ ಸ್ವಂತ ವಾಹನಗಳಿಗಿಂತ ಮೆಟ್ರೋದಲ್ಲಿ ಓಡಾಡಲು ಇಚ್ಛಿಸುತ್ತಾರೆ. ಡಿ.೩೧ರಂದು ಒಂದೇ ದಿನ ಆರು ಲಕ್ಷದ ಐವತ್ತು ಪ್ರಯಾಣಿಕರು ಸಂಚರಿಸಿದ್ದು, ಒಂದು ಕೋಟಿ, 70 ಲಕ್ಷ ರೂಪಾಯಿ ಆದಾಯ ಗಳಿಸಿದೆ.
ಮೆಟ್ರೋ ಇತಿಹಾಸದಲ್ಲಿ ಒಂದು ದಿನ ಇಷ್ಟೊಂದು ಮಂದಿ ಸಂಚರಿಸಿದ್ದು ಹಾಗೂ ಇಷ್ಟೊಂದು ಆದಾಯ ಆಗಿದ್ದು ಇದೇ ಮೊದಲು. ಹೊಸ ವರ್ಷಕ್ಕಾಗಿ ಮಧ್ಯರಾತ್ರಿ ಎರಡು ಗಂಟೆವರೆಗೆ ಮೆಟ್ರೋ ಸೇವೆ ಲಭ್ಯವಿತ್ತು. ಎಂಜಿ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಮಾರ್ಗದಲ್ಲಿ ಹೆಚ್ಚು ಮಂದಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!