ಆಕಸ್ಮಿಕವಾಗಿ ಹಾರಿದ ಗುಂಡು: ಗಾಯಗೊಂಡ ಬಿಎಸ್‌ಎಫ್‌ ಯೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್‌ ಭುಜ್‌ ಪ್ರದೇಶದಲ್ಲಿ ತೇಲುವ ರಕ್ಷಣಾ ಔಟ್‌ ಪೋಸ್ಟ್‌ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ರೈಫಲ್‌ ನಿಂದ ಗುಂಡು ಹಾರಿದ ಪರಿಣಾಮ ಯೋಧನೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.

ಗಸ್ತು ಮುಗಿಸಿ ವಾಪಸ್‌ ಬಂದ ಕಾನ್ಸ್ಟೇಬಲ್‌ ಪ್ರತಾಪ್‌ ಅವರು ತಮ್ಮ ರೈಫಲ್‌ ಅನ್ನು ಠಾಣೆಯಲ್ಲಿ ಇಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು ಸಮುದ್ರದ ಅಲೆಗಳ ಏರಿಳಿತಗಳಿಂದಾಗಿ ತೇಲುವ ರಕ್ಷಣಾ ಔಟ್‌ ಪೋಸ್ಟ್‌ನಲ್ಲಿ ಬ್ಯಾಲೆನ್ಸ್‌ ತಪ್ಪಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಸ್ವಂತ ರೈಫಲ್‌ ನಿಂದ ಗುಂಡು ಹಾರಿ ಅವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ವಾಯುಸೇನಾ ಹೆಲಿಕಾಪ್ಟರ್‌ ಮೂಲಕ ಭುಜ್‌ ನ ಜಿಕೆಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!