ಅಚಾನಕ್ ಪ್ರಸಿದ್ಧಿಗೆ ಬಂದ ರಜತ್ ಪಾಟೀದಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಜತ್ ಪಾಟೀದಾರ್ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದ ಆಟಗಾರ. ಆರ್‌ಸಿಬಿಯ ಲವ್ನಿತ್ ಸಿಸೋಡಿಯಾ ಗಾಯಗೊಂಡ ಕಾರಣಕ್ಕಾಗಿ ಆರ್‌ಸಿಬಿ ಪಾಟೀದಾರ್‌ನನ್ನು 20 ಲಕ್ಷ ರೂ. ನೀಡಿ ಕೊಂಡುಕೊಂಡಿತ್ತು. ತಮಗೆ ದೊರೆತ ಅವಕಾಶವನ್ನು ಪಾಟೀದಾರ್ ಹೇಗೆ ಬಳಸಿಕೊಂಡರು ಎಂಬುದು ಈಗ ಎಲ್ಲರ ಕಣ್ಣಮುಂದಿದೆ.
ಲಕ್ನೋ ಆಟಗಾರರು ಕೈಚೆಲ್ಲಿದ ಕೆಲವು ಕ್ಯಾಚ್‌ಗಳೂ ಪಾಟೀದಾರ್ ನೆರವಿಗೆ ಬಂದವು ಎಂಬುದೂ ನಿಜ. ಪಾಟೀದಾರ್ ೫೪ ಎಸೆತಗಳಲ್ಲೇ 112 ರನ್ ಗಳಿಸಿದ್ದು, ಅದರಲ್ಲಿ 7 ಸಿಕ್ಸರ್ ಹಾಗೂ 12 ಬೌಂಡರಿಗಳಿದ್ದವು.
ಪಾಟೀದಾರ್ ಕುಟುಂಬವು ನೀರಾವರಿ ಪೈಪ್ ತಯಾರಕ ಉದ್ಯಮದಲ್ಲಿ ತೊಡಗಿದ್ದು, ರಜತ್ ಕೂಡ ಅದೇ ಉದ್ಯಮ ಮುಂದುವರಿಸಬೇಕೆಂಬುದು ಕುಟುಂಬದವರ ಇಚ್ಛೆಯಾಗಿತ್ತು. ಆದರೆ ರಜತ್ ಮಾತ್ರ ಕ್ರಿಕೆಟಿನಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದರು. ಕೊನೆಗೂ ಅವರ ಆಸೆಯು ಕೈಗೂಡಿತ್ತು.
ಅವರ ಮದುವೆ ಕೂಡ ಮೇ 9ಕ್ಕೆ ನಿಗದಿಯಾಗಿತ್ತು. ಆರ್‌ಸಿಬಿಯಿಂದ ಕರೆ ಬಂದ ಕಾರಣ ಅವರು ಮದುವೆ ಮುಂದೂಡಿದ್ದರು.
“ರಜತ್‌ರ ಬ್ಯಾಟಿಂಗ್ ನಾನು ಕಂಡ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು” ಎಂದು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!