ಮಂಡ್ಯ | ಚರ್ಚ್ ಬಳಿ ಗಂಡು ಮಗುವನ್ನು ಬಿಟ್ಟು ಹೋದ ಅಪರಿಚಿತರು!

ಹೊಸ ದಿಗಂತ ವರದಿ, ಮಂಡ್ಯ:

ನಗರದ ಫ್ಯಾಕ್ಟರಿ ವೃತ್ತದ ಸಮೀಪದ ಚರ್ಚ್ ಬಳಿ ಅಪರಿಚಿತರು ಒಂದು ವರ್ಷದ ಗಂಡು ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದಾರೆ.
ಬುಧವಾರ ರಾತ್ರಿ ಮಗುವನ್ನು ಚರ್ಚ್ ಬಳಿ ಬಿಟ್ಟು ಹೋಗಿದ್ದು, ಗುರುವಾರ ಬೆಳಗ್ಗೆ ಸಾರ್ವಜನಿಕರು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೆಲ ಮಾಹಿತಿ ಪಡೆದು ಮಗುವನ್ನು ವಶಕ್ಕೆ ಪಡೆದರು.
ಈ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮಗುವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!