Monday, July 4, 2022

Latest Posts

ಯುಗಾದಿಗೆ ತೆರೆ ಮೇಲೆ ಬರಲಿದೆ ಮೆಗಾಸ್ಟಾರ್ ನಟನೆಯ ಆಚಾರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಕಾರಣಗಳಿಂದ ಫೆ.4ರಂದು ಬಿಡುಗಡೆಯಾಗಬೇಕಿದ್ದ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರ ಆಚಾರ್ಯ ಯುಗಾದಿಗೆ ಬಿಡುಗಡೆಯಾಗಲಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಚಿತ್ರತಂಡ, ಈ ಯುಗಾಇಗೆ ಮೆಗಾಸ್ಟಾರ್ ಅವರ ಮಾಸ್ ಚಿತ್ರವನ್ನು ಬೆಳ್ಳಿತೆರೆ ಮೇಲೆ ನೋಡಲಿದ್ದೀರಿ. ಏ.1ಕ್ಕೆ ಆಚಾರ್ಯ ಬಿಡುಗಡೆಯಾಗಲಿದೆ ಎಂದಿದೆ.
ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಫೆ.4ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಏ.1ಕ್ಕೆ ಮುಂದೂಡಲ್ಪಟ್ಟಿದೆ. ಇದೇ ದಿನ ಮಹೇಶ್ ಬಾಬು ನಟನೆಯ ಸಾರ್ಕಾರು ವಾರಿ ಪಾಠ ಚಿತ್ರವೂ ಬಿಡುಗಡೆಯಾಗಲಿದ್ದು, ಎರಡೂ ಚಿತ್ರಗಳು ಸಖತ್ ಪೈಪೋಟಿ ನೀಡಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss