Wednesday, February 1, 2023

Latest Posts

ಮಲಗಿದ್ದಲ್ಲೇ ಸಾವನ್ನಪ್ಪಿದ ನಟ ದುಲ್ಕರ್ ಸಲ್ಮಾನ್ ಡ್ರೈವರ್: ಕಾರಣ ನಿಗೂಢ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರ ಡ್ರೈವರ್ ಭಾಸ್ಕರ್ ಪ್ರಸಾದ್ ಸಾವನ್ನಪ್ಪಿದ್ದಾರೆ . ಆದ್ರೆ ಅವರ ಇದೀಗ ಹಲವು ಗೊಂದಲಗಳನ್ನು ಸೃಷ್ಟಿಸಿದೆ.

ಕಾರಣ ನಿನ್ನೆ ರಾತ್ರಿ ದುಲ್ಕರ್ ಅವರನ್ನು ಏರ್ ಪೋರ್ಟಿಗೆ ಬಿಟ್ಟು ಬಂದ ಪ್ರಸಾದ್ , ಪಿಜ್ಜಾ ಮತ್ತು ಕೂಲ್ ಡ್ರಿಂಕ್ಸ್ ಕುಡಿದು ಮಲಗಿದ್ದು ಎನ್ನಲಾಗುತ್ತಿದೆ.. ಮುಂಜಾನೆ ವೇಳೆ ನಿಧನರಾಗಿದ್ದಾರೆ.

ಈ ಘಟನೆ ದುಲ್ಕರ್ ಅವರ ಚೆನ್ನೈನ ಮನೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.ಅಲ್ಲಿನ ಮನೆಯ ಸಿಬ್ಬಂದಿ ಹೇಳಿರುವ ಪ್ರಕಾರ, ‘ಏರ್ ಪೋರ್ಟ್ ನಿಂದ ಮನೆಗೆ ಬಂದು, ಪಿಜ್ಜಾ ತಿಂದಿದ್ದಾರೆ. ನಂತರ ಕೂಲ್ ಡ್ರಿಂಕ್ಸ್ ಕೂಡ ಕುಡಿದಿದ್ದಾರೆ. ಹಾಗೆಯೇ ಮಲಗಿದ್ದವರು ವಿಪರೀತ ಕೆಮ್ಮಿದ್ದಾರಂತೆ. ಕೆಮ್ಮುತ್ತಲೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆ ಸೇರುವ ಮುನ್ನವೇ ಅವರ ಪ್ರಾಣ ಹೋಯಿತು’ ಎಂದಿದ್ದಾರೆ.

ಭಾಸ್ಕರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರವಷ್ಟೇ ಭಾಸ್ಕರ್ ಅವರಿಗೆ ಏನಾಯಿತು ಎನ್ನುವ ವಿವರ ಸಿಗಲಿದೆ.

ವಿಷಯ ತಿಳಿಯುತ್ತಿದ್ದಂತೆಯೇ ದುಲ್ಕರ್ ಕೂಡ ಕಣ್ಣೀರು ಹಾಕಿದ್ದು, ಮೃತ ಡ್ರೈವರ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಭಾಸ್ಕರ್ ಒಳ್ಳೆಯ ಚಾಲಕನಾಗಿದ್ದ ಎಂದು ಮಾತನಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!