Wednesday, September 28, 2022

Latest Posts

ನಟ ರಣ್‌ವೀರ್ ಸಿಂಗ್ ಭರ್ಜರಿ ‘ಬ್ಯಾಟಿಂಗ್‌’ಗೆ ಫಿದಾ ಆಯಿತು ಈ ಬಾರಿಯ ಫಿಲ್ಮ್ ಫೇರ್ 2022!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ರಣ್‌ವೀರ್ ಸಿಂಗ್ ಮಡಿಲಿಗೆ ಈ ಬಾರಿಯ ಅತ್ಯುತ್ತಮ ನಟ ಫಿಲ್ಮ್ -ರ್ ಪ್ರಶಸ್ತಿ ಒಲಿದುಬಂದಿದೆ. 1983ರಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದ ಘಟನಾವಳಿ ಆಧರಿಸಿ ತಯಾರಾದ ’83’ ಸಿನಿಮಾದಲ್ಲಿನ ನಟನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಇನ್ನು ಮಿಮಿ ಚಿತ್ರದಲ್ಲಿನ ನಟನೆಗಾಗಿ ಕೃತಿ ಸನೋನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶ್ತಿಗಳನ್ನು ನೀಡಲಾಯಿತು. ಸಿದ್ಧಾರ್ಥ್ ಮಲ್ಹೋತ್ರಾ ಅವರ ಶೇರ್ಶಾ, ಸಿದ್ಧಾರ್ಥ್ ಅವರ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಪಂಕಜ್ ತ್ರಿಪಾಠಿ, ಮಿಮಿ ಚಿತ್ರದಲ್ಲಿನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, ನಟಿ ಸಾಯಿ ತಮ್ಹಾಂಕರ್ ಅವರು ಮಿಮಿ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಸಹ ಪಡೆದರು. ನಟ ವಿಕ್ಕಿ ಕೌಶಲ್ ಮ್ಮ ಸರ್ದಾರ್ ಉಧಮ್ ಚಿತ್ರಕ್ಕಾಗಿ ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿದ್ಯಾ ಬಾಲನ್, ಶೆರ್ನಿ ಚಿತ್ರಕ್ಕಾಗಿ ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!