Monday, October 3, 2022

Latest Posts

ದೇಶದ ಮೊದಲ ವರ್ಚುವಲ್ ಶಾಲೆ ‘ದೆಹಲಿ ಮಾಡೆಲ್ ವರ್ಚುವಲ್ ಸ್ಕೂಲ್’ ಅಸ್ತಿತ್ವಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಮೊದಲ ವರ್ಚುವಲ್ ಶಾಲೆ, ದೆಹಲಿ ಮಾಡೆಲ್ ವರ್ಚುವಲ್ ಸ್ಕೂಲ್ ಇಂದಿನಿಂದ ಆರಂಭವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಇಂದು ನಾವು ದೇಶದ ಮೊದಲ ವರ್ಚುವಲ್ ಶಾಲೆ ಪ್ರಾರಂಭಿಸುತ್ತಿದ್ದೇವೆ, ಇದು ದೆಹಲಿ ಶಾಲಾ ಶಿಕ್ಷಣ ಮಂಡಳಿಯೊಂದಿಗೆ ಸಂಯೋಜಿತವಾಗಿದೆ. ಇಂದಿನಿಂದ 9ನೇ ತರಗತಿಗೆ ಪ್ರವೇಶಾತಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ. ದೇಶಾದ್ಯಂತದ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಲೈವ್ ತರಗತಿಗಳಿಗೆ ಹಾಜರಾಗಬಹುದು, ದೆಹಲಿಯ ಮಾಡೆಲ್ ವರ್ಚುವಲ್ ಸ್ಕೂಲ್‌ನಲ್ಲಿ ಲಭ್ಯವಿರುವ ರೆಕಾರ್ಡ್ ಮಾಡಲಾದ ತರಗತಿಗಳು, ಅಧ್ಯಯನ ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು ಎಂದ ಅವರು, ಜೆಇಇ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಕೂಡಾ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು.

ದೇಶದಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಮೂಲ ಶಿಕ್ಷಣ ದೊರೆಯುವವರೆಗೂ ಭಾರತ ವಿಶ್ವದಲ್ಲಿ ನಂಬರ್ 1 ರಾಷ್ಟ್ರವಾಗಲು ಸಾಧ್ಯವಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ದೇಶದ ಮೊದಲ ವರ್ಚುಯಲ್ ಶಾಲೆ ಆರಂಭವಾಗುತ್ತಿರುವುದು ಕ್ರಾಂತಿಕಾರಿ ನಡೆಯಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!