ಮದುವೆಯಾಗಿ 2 ವರ್ಷಕ್ಕೆ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ನಟಿ ಅಪರ್ಣಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಮತ್ತು ತಮಿಳು ನಟಿ ಅಪರ್ಣಾ ವಿನೋದ್ ಅವರು ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಪತಿಯಿಂದ ದೂರವಾಗಿರೋದಾಗಿ ಘೋಷಿಸಿದ್ದಾರೆ.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನನ್ನ ಜೀವನದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸಾಕಷ್ಟು ಯೋಚಿಸಿಕೊಂಡು ನಾನು ನನ್ನ ಪತಿಯಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಇದು ಸುಲಭವಾದ ಆಯ್ಕೆಯಾಗಿರಲಿಲ್ಲ. ಆದರೆ ಇದು ನನಗೆ ಸರಿಯಾದ ಆಯ್ಕೆಯಾಗಿತ್ತು. ನನ್ನ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾಗಿತ್ತು. ನನ್ನ ಮದುವೆಯು ಭಾವನಾತ್ಮಕವಾಗಿ ಕಷ್ಟಕರ ಹಂತವಾಗಿತ್ತು. ಜೀವನದಲ್ಲಿ ಈ ಅಧ್ಯಾಯವನ್ನು ಮುಚ್ಚಿ ಮುಂದೆ ಹೋಗಲು ನಿರ್ಧರಿಸಿದ್ದೇನೆ. ಈ ಸಮಯದಲ್ಲಿ ನಾನು ಪಡೆದ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಙಳಾಗಿದ್ದೇನೆ. ಮುಂದೆ ಒಳ್ಳೆಯದಾಗುತ್ತದೆ ಎನ್ನುವ ವಿಶ್ವಾಸ ಹಾಗೂ ನಂಬಿಕೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನೂ ರಿನಿಲ್ ರಾಜ್ ಅವರನ್ನು 2022ರಲ್ಲಿ ನಟಿ ಮದುವೆಯಾದರು. ಕೆಲ ಮನಸ್ತಾಪಗಳಿಂದ ವೈವಾಹಿಕ ಜೀವನಕ್ಕೆ ಅಪರ್ಣಾ ಅಂತ್ಯ ಹಾಡಿದ್ದಾರೆ.

2015ರಲ್ಲಿ ತೆರೆಕಂಡ ‘ನನ್ನ ನಿನ್ನೊಡು ಕೂಡೆಯುಂಡು’ ಮೂಲಕ ನಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ನಂತರ ದಳಪತಿ ವಿಜಯ್ ಮತ್ತು ಕೀರ್ತಿ ಸುರೇಶ್ ಜೊತೆ ಭೈರವ ಸಿನಿಮಾದಲ್ಲಿ ಅಪರ್ಣಾ ನಟಿಸಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!