Tuesday, February 7, 2023

Latest Posts

ಬಿಗ್‌ ಬಾಸ್‌ ಮನೆಯಲ್ಲಿ ಆಟಮುಗಿಸಿದ ನಟಿ ಕಾವ್ಯಶ್ರೀ ಗೌಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಿಗ್‌ ಬಾಸ್‌ ಸೀಸನ್‌ 9 ನ ಹಿಂದಿನ ವಾರ ವಿನೋದ್‌ ಗೊಬ್ಬರಗಾಲ ಅಳುತ್ತಲೇ ಮನೆಯಿಂದ ಹೊರ ನಡೆದಿದ್ದಾರೆ. ಇದೀಗ ಈ ವಾರ ಕಾವ್ಯಶ್ರೀ ಗೌಡ ಔಟ್‌ ಆಗಿದ್ದಾರೆ.
ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ 17ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು. ಚನ್ನಪಟ್ಟಣ ಊರಿನವರಾದ ಇವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ.
ಮನೆಗೆ ಎಂಟ್ರಿ ಎಂಟ್ರಿ ಆದ ಮೊದಲನೇ ವಾರ ಸ್ಪರ್ಧಿಗಳು ತಮಗೆ ಬೇಕಾದವರ ಜತೆ ಒಂದು ವಾರ ಹಗ್ಗ ಕಟ್ಟಿಕೊಂಡ ಅವರ ಜತೆಗೆ ಇರಬೇಕಿತ್ತು. ರೂಪೇಶ್‌ ಶೆಟ್ಟಿ ಮತ್ತು ಕಾವ್ಯಶ್ರೀ ಗೌಡ ಜತೆಯಾಗೇ ಇರುತ್ತಿದ್ದರು.
ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕಾವ್ಯಶ್ರೀ ಅವರ ಬಿಗ್ ಬಾಸ್ ಆಟ ಕೊನೆಯಾಗಿದೆ‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!