ನನ್ನ ಸ್ನೇಹಿತ ನರೇಂದ್ರ ಮೋದಿ ಅವರನ್ನು ನಂಬುತ್ತೇನೆ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಿ20 ಅಧ್ಯಕ್ಷೀಯ ಜವಾಬ್ದಾರಿಯನ್ನು ಭಾರತವು ಅಧಿಕೃತವಾಗಿ ಸ್ವೀಕರಿಸುತ್ತಿದ್ದಂತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ಮೋದಿ ಜತೆಗಿರುವ ಫೋಟೋವನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಶಾಂತಿ ಹಾಗೂ ಸುಸ್ಥಿರ ಜಗತ್ತು ನಿರ್ಮಾಣಕ್ಕೆ ಉಭಯ ರಾಷ್ಟ್ರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

 

ಈ ಕುರಿತು ಟ್ವಿಟ್ ಮಾಡಿರುವ ಅವರು, ಒಂದು ಭೂಮಿ, ಒಂದು ಫ್ಯಾಮಿಲಿ, ಒಂದು ಭವಿಷ್ಯ. ಭಾರತವು ಜಿ20 ಪ್ರೆಸಿಡೆನ್ಸಿಯನ್ನು ಪಡೆದುಕೊಂಡಿದೆ.ನನ್ನ ಸ್ನೇಹಿತ ನರೇಂದ್ರ ಮೋದಿ ಅವರು ಶಾಂತಿ ಮತ್ತು ಹೆಚ್ಚು ಸುಸ್ಥಿರ ಜಗತ್ತನ್ನು ನಿರ್ಮಿಸಲು ನಮ್ಮನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆಂದು ನಾನು ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಗುರುವಾರ ಭಾರತವು ಅಧಿಕೃತವಾಗಿ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಹಿನ್ನೆಲೆಯಲ್ಲಿ ಭಾರತವು ಒಂದು ವಾರ ಕಾಲ ಪಾರಂಪರಿಕ ತಾಣಗಳಲ್ಲಿ ದೀಪಗಳನ್ನು ಬೆಳಗಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!