ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ನಟಿ ಮೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅವರ ನಿಧನದ ನಂತರದಲ್ಲಿ ಇದೇ ಮೊದಲ ಬಾರಿಗೆ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.
ನಿಧನದ ನಂತರದಲ್ಲಿ ಅವರು ಇದೇ ಮೊದಲ ಬಾರಿಗೆ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.

‘ನನ್ನ ಪ್ರೀತಿಯ ಪತಿ ವಿದ್ಯಾ ಸಾಗರ್ ಅವರ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಮ್ಮ ಖಾಸಗಿತನವನ್ನು ಗೌರವಿಸಿ ಮತ್ತು ಸ್ವಲ್ಪ ಸಹಾನುಭೂತಿಯನ್ನು ತೋರಿಸಿ ಎಂದು ನಾನು ಎಲ್ಲಾ ಮಾಧ್ಯಮಗಳ ಬಳಿ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ’ .
‘ಈ ಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಸಹಾಯಕ್ಕೆ ನಿಂತ ಒಳ್ಳೆಯ ಹೃದಯಗಳಿಗೆ ನನ್ನ ಕೃತಜ್ಞತೆ. ಅತ್ಯುತ್ತಮ ಪ್ರಯತ್ನ ಮಾಡಿದ ಎಲ್ಲಾ ವೈದ್ಯಕೀಯ ತಂಡಕ್ಕೆ, ನಮ್ಮ ಸಿಎಂ, ಆರೋಗ್ಯ ಸಚಿವರು, ಸ್ನೇಹಿತರು, ಕುಟುಂಬ, ಮಾಧ್ಯಮಗಳು ಪ್ರೀತಿ ಕಳುಹಿಸಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ
ವಿದ್ಯಾ ಸಾಗರ್ ನಿಧನಕ್ಕೆ ಕೊವಿಡ್ ಕಾರಣ ಎಂದೇ ಹೇಳಲಾಗಿತ್ತು. ಈ ಬಗ್ಗೆ ಅನೇಕ ಅಂತೆಕಂತೆಗಳು ಹರಿದಾಡಿದ್ದವು. ಈ ಕುರಿತು ನಟಿ ಖುಷ್ಬೂ ಕಡೆಯಿಂದ ಸ್ಪಷ್ಟನೆ ಕೂಡ ಸಿಕ್ಕಿತ್ತು. ಈ ಸಂದರ್ಭದಲ್ಲಿ ವದಂತಿಗಳನ್ನು ಜನರು ನಿಜ ಎಂದು ನಂಬಿಕೊಳ್ಳುತ್ತಾರೆ. ಹಾಗಾಗಬಾರದು ಎಂಬ ಕಾರಣಕ್ಕೆ ಮೀನಾ ವಿಶೇಷ ಮನವಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!